ನೆರೆಹೊರೆಯ ಸಮುದಾಯಗಳಿಗೆ ಸೇವೆ ನೀಡಲು ಮಣಿಪಾಲ್‌ ಆಸ್ಪತ್ರೆ ಕಡೆಯಿಂದ ಉಚಿತ ಶಸ್ತ್ರಚಿಕಿತ್ಸಾ ಉಪಕ್ರಮಕ್ಕೆ ಚಾಲನೆ

ಹೊಸದಿಗಂತ ವರದಿ ಬೆಂಗಳೂರು: 

ಕನಕಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು, ಮಣಿಪಾಲ್ ಫೌಂಡೇಶನ್ ಸಹಯೋಗದೊಂದಿಗೆ ಹೊಸ ಆಸ್ಪತ್ರೆಯ ಘಟಕದ ಸಮುದಾಯ ಉನ್ನತೀಕರಣ ಉಪಕ್ರಮದ ಭಾಗವಾಗಿ, 30 ವಸತಿ ಅಪಾರ್ಟ್‌ಮೆಂಟ್‌ಗಳ ಕಾರ್ಯಾಚರಣೆಯ ಸಿಬ್ಬಂದಿಗೆ 10 ಉಚಿತ ಶಸ್ತ್ರಚಿಕಿತ್ಸೆಗಳನ್ನು ಘೋಷಿಸಿದೆ.

ಉದ್ಯಾನವನ‌ ನಿರ್ವಹಣಾ ಸಿಬ್ಬಂದಿಗಳು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಭದ್ರತಾ ಸಿಬ್ಬಂದಿ, ಮನೆಗೆಲಸದವರು, ಮತ್ತು ಸ್ವಚ್ಛತಾ ಕಾರ್ಯಕರ್ತರು ಈ ಸೌಲಭ್ಯಕ್ಕೆ ಭಾಜನರಾಗಲಿದ್ದಾರೆ. ಈ ಉಚಿತ ಶಸ್ತ್ರಚಿಕಿತ್ಸೆಗಳು 2025 ರ‌ ಇಡೀ ವರ್ಷ ಲಭ್ಯವಿರಲಿವೆ.

ಪ್ರೆಸ್ಟೀಜ್ ಫಾಲ್ಕನ್ ಸಿಟಿ, ಶೋಭಾ ಫಾರೆಸ್ಟ್ ವ್ಯೂ, ಶೋಭಾ ಫಾರೆಸ್ಟ್ ಎಡ್ಜ್, ಶೋಭಾ ಅರೇನಾ, ಮಂತ್ರಿ ಸೆರೆನಿಟಿ, ಮಂತ್ರಿ ಟ್ರ್ಯಾಂಕುಯಿಲ್, ಎಲ್&ಟಿ ಸೌತ್ ಸಿಟಿ, ಟಾಟಾ ಪ್ರಾಮಂಟ್, ಬ್ರಿಗೇಡ್ ಮೆಡೋಸ್, ಪೂರ್ವ ಹೈಲ್ಯಾಂಡ್, ಕಾಂಕಾರ್ಡ್ ನಪಾ ವ್ಯಾಲಿ, ಸೆಂಚುರಿ ಇಂಡಸ್, ಸತ್ವ ಚಾರ್ಮಿಂಗ್ ಮಿಸ್ಟ್, ವಿಸ್ತಾರ, ಗೋಕುಲಂ, ಶ್ರೀ ವರ ವಿವಂತ, ರೋಹಿತ್ ಆಕೃತಿ, ಎಂಕೆಆರ್ ಅಸೋಸಿಯೇಷನ್, ಸಿಎಂಕೆಆರ್ ಅಸೋಸಿಯೇಷನ್, ಕನಕಪುರ ಚೈನ್ ಮೇಕರ್ಸ್ ಅಸೋಸಿಯೇಷನ್ ಮತ್ತು ವ್ಯಾಲ್ಯೂ ಪ್ಲಸ್ ಸೇರಿದಂತೆ ಸುಮಾರು 30 ಅಪಾರ್ಟ್ಮೆಂಟ್ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಉಪಕ್ರಮಕ್ಕೆ ಸಹಕರಿಸಿದ್ದು, ತಮ್ಮ ಸಮುದಾಯಗಳಲ್ಲಿನ ಅಗತ್ಯವುಳ್ಳ ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಈ ಉಪಕ್ರಮದ ಪ್ರಕಟಣೆಯನ್ನು ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ ಕಾರ್ತಿಕ್ ರಾಜಗೋಪಾಲ್ ಮತ್ತು ಮಣಿಪಾಲ್ ಆಸ್ಪತ್ರೆಗಳ ಬೆಂಗಳೂರು, ಮೈಸೂರು ಮತ್ತು ಸೇಲಂ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ ದೀಪಕ್ ವೇಣುಗೋಪಾಲನ್ ಅವರ ಸಮ್ಮುಖದಲ್ಲಿ ನಡೆಸಲಾಯಿತು.

ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ ಕಾರ್ತಿಕ್ ರಾಜಗೋಪಾಲ್ ಮಾತನಾಡಿ, ನಮ್ಮ ಹೊಸ ಕನಕಪುರ ರಸ್ತೆಯ ಘಟಕದ ಈ ವಿಶಿಷ್ಟ ಉಪಕ್ರಮವು ನಮ್ಮ ನೆರೆಹೊರೆಯ ಸಮುದಾಯಗಳಿಗೆ ಸೇವೆ‌ ನೀಡುವ ಬಗ್ಗೆ ನಾವು ಹೊಂದಿರುವ ಅಗಾಧವಾದ ಬದ್ಧತೆಯನ್ನು ತೋರಿಸುತ್ತದೆ. ಅಗತ್ಯದಲ್ಲಿರುವವರಿಗೆ 10 ಉಚಿತ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಮೂಲಕ, ನಾವು ಆರ್ಥಿಕ ಅಡೆತಡೆಗಳಿಗೆ ಪರಿಹಾರ ಒದಗಿಸುತ್ತಿದ್ದೇವೆ. ಗುಣಮಟ್ಟದ ಆರೈಕೆ ಮತ್ತು ಕಾರ್ಪೊರೇಟ್ ಆಸ್ಪತ್ರೆಯ ಅನುಭವವನ್ನು ಒದಗಿಸುತ್ತಿದ್ದೇವೆ. ಗ್ರಾಹಕ ಕೇಂದ್ರಿತ ಅಂಶವು ನಮ್ಮ ಆರೈಕೆಯ ಮೂಲತತ್ವವಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ನಮ್ಮೆಲ್ಲ ನೆರೆಹೊರೆಯ ಸಮುದಾಯಗಳ ನಂಬಿಕೆಯನ್ನು ಗೌರವಿಸುವುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!