ಭಾರತದ ಪ್ರತಿಯೊಂದು ರಾಜ್ಯದಲ್ಲೂ ಪಾನಿಪುರಿ ಜನಪ್ರಿಯ ತಿನಿಸಾಗಿದೆ. ಸಂಜೆ ಹೊತ್ತಿಗೆ ರಸ್ತೆ ಬದಿಯಲ್ಲಿ ಪಾನಿಪುರಿ ಅಂಗಡಿಗಳ ಮುಂದೆ ಜನಸಂದಣಿ ತುಂಬಿರೋದು ಸಾಮಾನ್ಯ. ಹೋಟೆಲ್ಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ ಸಿಕ್ಕರೂ ರಸ್ತೆ ಬದಿಯ ಪಾನಿಪುರಿಯೇ ಜನರಿಗೆ ಹೆಚ್ಚು ಇಷ್ಟ. ಪ್ರತಿ ರಾಜ್ಯದಲ್ಲಿ ಪಾನಿಪುರಿಗೆ ಹೆಸರು ಬೇರೆ, ರುಚಿಯಲ್ಲೂ ಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತದೆ.
ಗೋಲ್ಗಪ್ಪಾ
ದೆಹಲಿ, ಉತ್ತರ ಪ್ರದೇಶ, ಪಂಜಾಬ್ಗಳಲ್ಲಿ ಪಾನಿಪುರಿಗೆ “ಗೋಲ್ಗಪ್ಪಾ” ಎಂದು ಕರೆಯಲಾಗುತ್ತದೆ. ಸಣ್ಣ ವೃತ್ತಾಕಾರದ ಪುರಿಯನ್ನ ಇಡಿಯಾಗಿ ಬಾಯಿಗೆ ಹಾಕಿಕೊಂಡು ತಿನ್ನೋದರಿಂದ ಈ ಹೆಸರಿನ ಬಂದಿದೆ ಎನ್ನಲಾಗಿದೆ.
ಪುಚ್ಕಾ
ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂಗಳಲ್ಲಿ ಪಾನಿಪುರಿ “ಪುಚ್ಕಾ” ಹೆಸರಿನಿಂದ ಪ್ರಸಿದ್ಧ. ಇಲ್ಲಿ ಪುರಿಯೊಳಗೆ ತುಂಬುವ ಆಲೂಗಡ್ಡೆ ಪಲ್ಯ ಸಖತ್ ಸ್ಪೈಸಿ ಆಗಿದ್ದು, ರುಚಿಯೂ ಖಾರವಾಗಿರುತ್ತದೆ.
ಗುಪ್ಚುಪ್
ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್ಗಢ್ನಲ್ಲಿ ಪಾನಿಪುರಿಯನ್ನ “ಗುಪ್ಚುಪ್” ಎಂದು ಕರೆಯುತ್ತಾರೆ. ಬಾಯಿಗೆ ಹಾಕಿಕೊಂಡು ತಿನ್ನುವಾಗ ಬರುವ “ಚುಪ್” ಶಬ್ದದಿಂದಲೇ ಈ ಹೆಸರು ಬಂದಿದೆ ಎನ್ನಲಾಗುತ್ತದೆ.
ಪಾನಿಪುರಿ
ಮುಂಬೈ, ಪುಣೆ, ಗುಜರಾತ್ ಮತ್ತು ಕರ್ನಾಟಕದಲ್ಲಿ ಇದನ್ನು ಪಾನಿಪುರಿ ಎಂದೇ ಕರೆಯುತ್ತಾರೆ. ಎಲ್ಲೆಡೆ ಈ ಹೆಸರು ಜನಪ್ರಿಯವಾಗಿದ್ದು, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಹೆಸರಾಗಿದೆ.
ಪಕೋಡಿ
ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಪಾನಿಪುರಿಗೆ “ಪಕೋಡಿ” ಎಂಬ ಹೆಸರಿದೆ. ಇಲ್ಲಿ ಕೂಡ ಒಳಗೆ ತುಂಬುವ ಪಲ್ಯ ಸ್ವಲ್ಪ ಹೆಚ್ಚು ಸ್ಪೈಸಿ ಆಗಿರುತ್ತದೆ.
ಪಾನಿಪುರಿ ಯಾವ ಹೆಸರಿನಿಂದ ಕರೆದರೂ, ಅದು ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಗೋಲ್ಗಪ್ಪಾ, ಪುಚ್ಕಾ, ಗುಪ್ಚುಪ್ ಅಥವಾ ಪಕೋಡಿ ಯಾವ ರೂಪದಲ್ಲೇ ಇರಲಿ, ಪಾನಿಪುರಿಯ ರುಚಿ ಜನರನ್ನು ಒಂದೇ ಬಟ್ಟಲಲ್ಲಿ ಸೇರಿಸುವ ಸಾಮರ್ಥ್ಯ ಹೊಂದಿದೆ.