ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ನೋರಾ ಫತೇಹಿ ಮೈಮಾಟದಂತೆ ನೀನೂ ಆಗಬೇಕು, ಅವಳಂತೆಯೇ ನೀನು ಕಾಣಬೇಕು ಎಂದು ಪತಿಯೊಬ್ಬ ಪತ್ನಿಗೆ ಊಟ ನೀಡದೇ ಚಿತ್ರಹಿಂಸೆ ನೀಡಿದ್ದಾನೆ.
ಗಾಜಿಯಾಬಾದ್‌ನ ಮಹಿಳೆಯೊಬ್ಬರು ಪೊಲೀಸರಿಗೆ ನೀಡಿದ ದೂರು ವಿಚಿತ್ರವಾಗಿದೆ. ತನ್ನ ಪತಿ ಮತ್ತು ಅತ್ತೆ-ಮಾವ ವರದಕ್ಷಿಣೆಗಾಗಿ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂಬುದರ ಜೊತೆಗೆ ಬಾಲಿವುಡ್ ನಟಿ ನೋರಾ ಫತೇಹಿ ಅವರಂತೆ ದೇಹವನ್ನು ಕಾಪಾಡಿಕೊಳ್ಳಬೇಕೆಂದು ಪತಿ ಹಿಂಸೆ ನೀಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಗರ್ಭಪಾತ ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಕಾರಣ ಗರ್ಭಪಾತಕ್ಕೆ ಕಾರಣವಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ. ಆರು ತಿಂಗಳ ಹಿಂದೆ ವಿವಾಹವಾದ ಮಹಿಳೆ, ಮದುವೆಗೆ ತನ್ನ ಕುಟುಂಬವು 76 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ತನ್ನ ಪತಿ ತನ್ನ ದೇಹವನ್ನು ನಿರಂತರವಾಗಿ ಅವಮಾನಿಸುತ್ತಿದ್ದರು, ನನ್ನನ್ನು “ದಪ್ಪ ಮತ್ತು ಕೊಳಕು” ಎಂದು ದೂಷಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಪತಿ ಮತ್ತು ಅತ್ತೆ-ಮಾವ ದಿನಕ್ಕೆ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡಬೇಕೆಂದು, ಅದನ್ನು ಪಾಲಿಸದಿದ್ದರೆ ಆಹಾರವೇ ಕೊಡುವುದಿಲ್ಲ ಎಂದು ದೂಷಿಸುತ್ತಿದ್ದರು. ಪತಿ ದೈಹಿಕವಾಗಿಯೂ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದನ್ನು ಸಹಾಯಕ ಪೊಲೀಸ್ ಆಯುಕ್ತೆ ಸಲೋನಿ ಅಗರ್ವಾಲ್ ದೃಢಪಡಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ದೂರುದಾರ ಮಹಿಳೆ, ನೀನು ಚಿತ್ರನಟಿ ನೋರಾ ಫತೇಹಿಯಂತೆ ದೇಹವನ್ನು ಕಾಪಾಡಿಕೊಂಡು ಸುಂದರವಾಗಿ ಕಾಣಬೇಕು ಎಂದು ಹೇಳುತ್ತಿದ್ದರು.. ತನ್ನ ಪತಿ ಹೆಣ್ಣುಬಾಕನಾಗಿದ್ದು ಆನ್ ಲೈನ್ ನಲ್ಲಿ ಮಹಿಳೆಯರ ನಗ್ನ ವಿಡಿಯೊಗಳನ್ನು ನೋಡುತ್ತಿದ್ದ ಎಂದು ಹೇಳಿಕೊಂಡಿದ್ದಾರೆ.