ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಝಡ್ ವರ್ಗದ ಭದ್ರತೆ ಒದಗಿಸಿದೆ. ಸಿಆರ್‌ಪಿಎಫ್ ತಂಡ ದೆಹಲಿ ಪೊಲೀಸರಿಂದ ಭದ್ರತಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ರೇಖಾ ಗುಪ್ತಾ, ಅವರ ಅಧಿಕೃತ ನಿವಾಸ ಮತ್ತು ರಾಷ್ಟ್ರ ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದ ರಾಜ್ ನಿವಾಸ್ ಮಾರ್ಗದಲ್ಲಿರುವ ಕ್ಯಾಂಪ್ ಆಫೀಸ್‌ನಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯುರಿಟಿ ಗ್ರೂಪ್‌ನ (ವಿಎಸ್‌ಜಿ) ಭದ್ರತೆಯನ್ನು ಒದಗಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಗುರುವಾರ ದೆಹಲಿ ಮುಖ್ಯಮಂತ್ರಿಯ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ವಹಿಸಿಕೊಂಡಿದೆ.
ದಿನದ 24 ಗಂಟೆಯೂ 22 ರಿಂದ 25 ಶಸ್ತ್ರಸಜ್ಜಿತ CRPF ಕಮಾಂಡೋಗಳ ತಂಡವು ಮುಖ್ಯಮಂತ್ರಿಯವರಿಗೆ ಭದ್ರತೆ ಒದಗಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಅವರ ಭದ್ರತೆಗಾಗಿ CRPF ಹೊಸ ಕ್ರಮಗಳನ್ನು ಜಾರಿಗೆ ತರುತ್ತದೆ ಎನ್ನಲಾಗಿದೆ.