ಮೇಷ
ಏರುಪೇರಿನ ದಿನ. ಅದಕ್ಕೆ ತಲೆ ಕೆಡಿಕೊಳ್ಳದಿರಿ. ನಿಮ್ಮಿಂದ ಪ್ರಾಮಾಣಿಕ ನಡೆ ಮೂಡಿಬರಲಿ. ವೃತ್ತಿ- ಖಾಸಗಿ ಬದುಕಿನ ಮಧ್ಯೆ ಸಮತೋಲನವಿರಲಿ.
ವೃಷಭ
ನಿಮಗೆ ಪ್ರತಿಕೂಲ ಪರಿಸ್ಥಿತಿ ಏರ್ಪಟ್ಟರೂ ತಾಳ್ಮೆಯಿಂದಲೆ ವರ್ತಿಸಿ. ಕೊನೆಗೆ ಎಲ್ಲವು ನಿಮ್ಮ ಪರವಾಗಿ ಬದಲಾಗಲಿದೆ. ಹಣದ ಕೊರತೆ ನೀಗಲಿದೆ.
ಮಿಥುನ
ದೃಢ ನಿಲುವು ಮುಖ್ಯ ನಿಜ. ಆದರೆ ಅದು ನಿಮ್ಮ ಕೌಟುಂಬಿಕ ಶಾಂತಿ ಕದಡದಿರಲಿ. ಕ್ಲಿಷ್ಟ ಪರಿಸ್ಥಿತಿ ನಿಭಾಯಿಸುವುದು ನಿಮಗೆ ಕಷ್ಟವೇನಲ್ಲ.
ಕಟಕ
ಎಷ್ಟೇ ಒತ್ತಡವಿದ್ದರೂ ನೆಮ್ಮದಿ ಕಳಕೊಳ್ಳದಿರಿ. ಆಶಾವಾದ ಬಿಡದಿರಿ. ಸಮಸ್ಯೆಗಳು ನಿಮಗೆ ಹೆಚ್ಚು ಹಾನಿ ಮಾಡದೆ ಪರಿಹಾರ ಕಾಣುವವು.
ಸಿಂಹ
ಸಮಸ್ಯೆಯಿಂದ ನಲುಗಿದ್ದೀರಿ. ಆದರೆ ಪಾಸಿಟಿವ್ ಚಿಂತನೆ ಬೆಳೆಸಿಕೊಳ್ಳಿ. ಪರಿಹಾರದ ದಾರಿ ನಿಮ್ಮ ಕಣ್ಣ ಮುಂದೆ ಗೋಚರಿಸುವುದು.
ಕನ್ಯಾ
ವ್ಯಕ್ತಿಯೊಬ್ಬರು ನಿಮ್ಮ ಸಹನೆ ಪರೀಕ್ಷಿಸುವರು. ಅವರ ನಡೆನುಡಿಗೆ ನಿಯಂತ್ರಣ ಹಾಕಿ. ಕ್ಷುಲ್ಲಕ ಟೀಕೆಗಳಿಗೆ ಅಂಜದಿರಿ. ನಿಮ್ಮ ಕಾರ್ಯ ಮಾಡಿರಿ.
ತುಲಾ
ಕೇಳುವವರಿಗೆ ನಿಮ್ಮ ಉದ್ದೇಶ ಸ್ಪಷ್ಟವಾಗುವಂತೆ ಮಾತಾಡಿ. ತಪ್ಪು ಕಲ್ಪನೆ ಬೆಳೆಯುವ ಸಾಧ್ಯತೆ ತಪ್ಪಿಸಲು ಇದು ಅವಶ್ಯ. ಕೌಟುಂಬಿಕ ಒತ್ತಡ.
ವೃಶ್ಚಿಕ
ಒತ್ತಡದ ಕಾರ್ಯ ದಿಂದ ದೂರವಿರಿ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಭವಿಷ್ಯದ ಚಿಂತೆ ಬಿಟ್ಟು ವರ್ತಮಾನದ ಖುಶಿ ಆನಂದಿಸಿ.
ಧನು
ನಿಮ್ಮ ಗುರಿಯನ್ನೆ ಬದಲಿಸಬೇಕಾದ ಪ್ರಸಂಗ ಒದಗೀತು. ಸದ್ಯದ ಗುರಿ ಸಾಧನೆ ಕಷ್ಟವೆಂದಾದೀತು. ಖರ್ಚಿನ ಮೇಲೆ ನಿಯಂತ್ರಣ ಸಾಽಸಿರಿ.
ಮಕರ
ಕ್ಷುಲ್ಲಕ ರಾಜಕೀಯ ದಿಂದ ದೂರವಿರಿ. ಯಾರ ಪಕ್ಷ ವಹಿಸಲೂ ಹೋಗಬೇಡಿ. ಕೆಲ ಬೆಳವಣಿಗೆ ನೆಮ್ಮದಿ ಕದಡಬಹುದು.
ಕುಂಭ
ಕೌಟುಂಬಿಕ ಸಮಸ್ಯೆ ಬಹಳ ದೊಡ್ಡದಾಗಿ ಕಂಡುಬಂದರೂ ನಿಜವಾಗಿ ಅದು ಬೇಗನೆ ಪರಿಹಾರ ಕಾಣಲಿದೆ. ನಿಮ್ಮ ಶಕ್ತಿ ಅಪವ್ಯಯ ಮಾಡಬೇಡಿ.
ಮೀನ
ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ. ಸಂಬಂಧದ ಮೌಲ್ಯ ಅರಿಯಿರಿ. ಬದುಕಿನ ಮಹತ್ವ ಎಲ್ಲಿದೆಯೆಂದು ಪರಾಮರ್ಶೆ ನಡೆಸಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ