ಬೇಕಾಗುವ ಸಾಮಾಗ್ರಿಗಳು
* 2 ಕಪ್ – ಸ್ವೀಟ್ ಕಾರ್ನ್
* 1/2 ಕಪ್ – ಕಡ್ಲೆ ಹಿಟ್ಟು
* 1/4 ಕಪ್ – ಅಕ್ಕಿ ಹಿಟ್ಟು
* 1 – ಸಣ್ಣ ಈರುಳ್ಳಿ
* 2 – ಹಸಿಮೆಣಸಿನಕಾಯಿ
* 1 ಇಂಚು – ಶುಂಠಿ
* 2-3 ಎಸಳು – ಬೆಳ್ಳುಳ್ಳಿ
* 1/2 ಟೀಸ್ಪೂನ್ – ಜೀರಿಗೆ
* 1/4 ಟೀಸ್ಪೂನ್ – ಅರಿಶಿನ
* 1/2 ಟೀಸ್ಪೂನ್ – ಖಾರದ ಪುಡಿ
* 1/4 ಟೀಸ್ಪೂನ್ – ಗರಂ ಮಸಾಲ
* ಸ್ವಲ್ಪ – ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕಷ್ಟು – ಉಪ್ಪು
* ಕರಿಯಲು – ಎಣ್ಣೆ
ಮಾಡುವ ವಿಧಾನ
ಮೊದಲಿಗೆ, ಒಂದು ಪಾತ್ರೆಯಲ್ಲಿ ಕಾರ್ನ್ ಕಾಳುಗಳನ್ನು ತೆಗೆದುಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನಂತರ, ಅದಕ್ಕೆ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಅರಿಶಿನ, ಖಾರದ ಪುಡಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ. ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಚಿಮುಕಿಸುತ್ತಾ ಚೆನ್ನಾಗಿ ಕಲಸಿ. ಪಕೋಡ ಹಿಟ್ಟಿನ ಹದಕ್ಕೆ ಬರುವಂತೆ ನೋಡಿಕೊಳ್ಳಿ. ಹಿಟ್ಟು ತುಂಬಾ ತೆಳುವಾಗಬಾರದು. ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಮಧ್ಯಮ ಉಷ್ಣಾಂಶಕ್ಕೆ ಬಂದ ನಂತರ, ಸಿದ್ಧಪಡಿಸಿದ ಹಿಟ್ಟಿನ ಮಿಶ್ರಣದಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಎಣ್ಣೆಗೆ ಹಾಕಿ. ಪಕೋಡವನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಕರಿರಿ.
ಕರಿದ ಪಕೋಡಗಳನ್ನು ಟಿಶ್ಯೂ ಪೇಪರ್ ಮೇಲೆ ತೆಗೆದಿಡಿ. ಹೆಚ್ಚುವರಿ ಎಣ್ಣೆ ಹೀರಿಕೊಳ್ಳುತ್ತದೆ.
ಬಿಸಿಬಿಸಿ ಕಾರ್ನ್ ಪಕೋಡ ಈಗ ಸವಿಯಲು ಸಿದ್ಧ. ಇದನ್ನು ಟೊಮೆಟೊ ಸಾಸ್ ಅಥವಾ ಪುದೀನ ಚಟ್ನಿಯೊಂದಿಗೆ ಬಡಿಸಿ.