ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೋಟೋಗಾಗಿ ಕಾಳಿಂಗ ಸರ್ಪವನ್ನು ಅಕ್ರಮವಾಗಿ ಸೆರೆ ಇಟ್ಟುಕೊಂಡಿದ್ದ ಅಂತರರಾಜ್ಯ ಜಾಲವನ್ನು ರಾಜ್ಯ ಅರಣ್ಯಾಧಿಕಾರಿಗಳು ಭೇದಿಸಿದ್ದಾರೆ. ಹಾವಿನ ಜೊತೆ ಫೋಟೋ ಮತ್ತು ವೀಡಿಯೋ ತೆಗೆದುಕೊಳ್ಳಲು ಸಾವಿರಾರು ರೂಪಾಯಿ ಹಣ ಪಡೆಯಲಾಗುತ್ತದೆ.
ಅನುಮತಿಯಿಲ್ಲದೆ ಕಾಳಿಂಗ ಸರ್ಪವನ್ನು ನಿರ್ವಹಿಸುವಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೊಡಗಿನ ಅರಣ್ಯ ಮೊಬೈಲ್ ಸ್ಕ್ವಾಡ್ (ಎಫ್ಎಂಎಸ್) ನ ತನಿಖಾಧಿಕಾರಿಗಳು ಮಹಾರಾಷ್ಟ್ರದ ವಿಕಾಸ್ ಜಗ್ತಾಪ್ ಮತ್ತು ಜನಾರ್ದನ್ ಭೋಸಲೆ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯವಾಗಿ ರಕ್ಷಿಸಲಾದ ಕಾಳಿಂಗ ಸರ್ಪದ ಛಾಯಾಚಿತ್ರ ತೆಗೆಯಲು ಇಬ್ಬರು ಈ ತಿಂಗಳ ಆರಂಭದಲ್ಲಿ ಕೊಡಗಿಗೆ ಭೇಟಿ ನೀಡಿದ್ದರು. ಕಾಳಿಂಗ ಸರ್ಪ ಮತ್ತು ಸ್ಥಳದ ಕುರಿತು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಆಧಾರದ ಮೇಲೆ ಅವರನ್ನು ಎಫ್ಎಂಎಸ್ ತನಿಖಾಧಿಕಾರಿಗಳು ಹಿಂಬಾಲಿಸುತ್ತಿದ್ದರು.
ಈ ವೇಳೆ ಅವರಿಬ್ಬರು ಕೊಡಗಿನಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿತು , ಆದರೆ ಅಲ್ಲಿಗೆ ಅಧಿಕಾರಿಗಳು ತೆರಳುವ ಕೆಲವು ಗಂಟೆಗಳ ಹಿಂದೆ ಇಬ್ಬರು ಅಲ್ಲಿಂದ ಹೊರಟುಹೋಗಿದ್ದರು. ಈ ಜೋಡಿ ತಮ್ಮ ಖಾಸಗಿ ಕಾರಿನಲ್ಲಿ ಕಾಳಿಂಗ ಸರ್ಪವನ್ನು ಹೊತ್ತೊಯ್ಯುತ್ತಿದ್ದಾರೆ ಎಂಬ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿತ್ತು.