ಮಹಿಳೆಯರ ಆರೋಗ್ಯದಲ್ಲಿ ಮಾಸಿಕ ಚಕ್ರವು ಬಹಳ ಮುಖ್ಯವಾದ ಅಂಶ. ಕೆಲವೊಮ್ಮೆ ಪೀರಿಯಡ್ಸ್ ವಿಳಂಬವಾಗುವುದು ಅಥವಾ ನಿರ್ದಿಷ್ಟ ದಿನಗಳಲ್ಲಿ ಬರಬೇಕೆಂದು ಬಯಸುವುದು ಸಾಮಾನ್ಯ. ವಿಶೇಷವಾಗಿ ಮದುವೆ, ಪ್ರವಾಸ ಅಥವಾ ಮುಖ್ಯ ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಮಹಿಳೆಯರು ಪೀರಿಯಡ್ಸ್ ಬೇಗ ಬರಲೆಂದು ಬಯಸುತ್ತಾರೆ. ವೈದ್ಯಕೀಯವಾಗಿ ನೋಡಿದರೆ, ಈ ಸಮಸ್ಯೆ ದೇಹದ ಹಾರ್ಮೋನ್ ಬದಲಾವಣೆ, ಒತ್ತಡ, ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಪರಿಣಾಮವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಮನೆಮದ್ದುಗಳನ್ನು ಪ್ರಯೋಗಿಸುವ ಮೂಲಕ ಪೀರಿಯಡ್ಸ್ ಬೇಗ ಬರಲು ಸಹಾಯವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, ಈ ಮನೆಮದ್ದುಗಳನ್ನು ಅತಿಯಾಗಿ ಬಳಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ ವೈದ್ಯರ ಸಲಹೆಯೊಂದಿಗೆ ಮಾತ್ರ ಪ್ರಯೋಗಿಸಬೇಕು.
ಅರಿಶಿನ ಹಾಲು
ಬೆಚ್ಚಗಿನ ಹಾಲಿನಲ್ಲಿ ಅರಿಶಿನ ಹಾಕಿ ಕುಡಿಯುವುದರಿಂದ ರಕ್ತ ಸಂಚಲನ ಸುಗಮವಾಗಿ ನಡೆಯುತ್ತದೆ. ಇದು ಗರ್ಭಾಶಯದ ಮೇಲೆ ಪರಿಣಾಮ ಬೀರಿಕೊಂಡು ಪೀರಿಯಡ್ಸ್ ಬೇಗ ಬರಲು ಸಹಕಾರಿ.
ಪಪ್ಪಾಯಿ ಸೇವನೆ
ಪಪ್ಪಾಯಿಯಲ್ಲಿ ಇರುವ ಎನ್ಜೈಮ್ಗಳು ಗರ್ಭಾಶಯದ ಸಂಕುಚನವನ್ನು ಹೆಚ್ಚಿಸುತ್ತವೆ. ಇದರಿಂದ ಪೀರಿಯಡ್ಸ್ ಶೀಘ್ರವಾಗಿ ಬರಲು ಸಾಧ್ಯ.
ಶುಂಠಿ-ಬೆಲ್ಲ ಕಷಾಯ
ಶುಂಠಿ ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ. ಬೆಲ್ಲದೊಂದಿಗೆ ಕುಡಿಯುವುದರಿಂದ ಪೀರಿಯಡ್ಸ್ ತ್ವರಿತವಾಗಿ ಬರಲು ಸಹಾಯವಾಗುತ್ತದೆ.
ಅನಾನಸ್ ತಿನ್ನುವುದು
ಅನಾನಸಿನಲ್ಲಿ ಇರುವ ಪ್ರಾಕೃತಿಕ ಎನ್ಜೈಮ್ಗಳು ಗರ್ಭಾಶಯದ ಗೋಡೆಗಳ ಮೇಲೆ ಒತ್ತಡ ಹಾಕುತ್ತವೆ. ಇದು ಮಾಸಿಕ ಚಕ್ರ ಬೇಗ ಬರಲು ಕಾರಣವಾಗಬಹುದು.
ಕ್ಯಾರಟ್ ಜ್ಯೂಸ್
ಕ್ಯಾರಟ್ನಲ್ಲಿ ಇರುವ ಪೋಷಕಾಂಶಗಳು ಹಾರ್ಮೋನ್ ಸಮತೋಲನಕ್ಕೆ ಸಹಕಾರಿ. ದಿನವೂ ಕುಡಿಯುವುದರಿಂದ ಪೀರಿಯಡ್ಸ್ ನಿಯಮಿತವಾಗಿ ಆಗುತ್ತದೆ.
ಪೀರಿಯಡ್ಸ್ ಬೇಗ ಬರಿಸಲು ಮನೆಮದ್ದುಗಳು ಸಹಾಯಕವಾಗಬಹುದು. ಆದ್ರೆ, ಹಾರ್ಮೋನಲ್ ಅಸಮತೋಲನ ಅಥವಾ ಆರೋಗ್ಯ ಸಮಸ್ಯೆಗಳು ಮುಂದುವರಿದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ಸ್ವಯಂ ಪ್ರಯೋಗ ಮಾಡುವ ಬದಲು ತಜ್ಞರ ಸಲಹೆಯನ್ನು ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)