February 9, 2026
Monday, February 9, 2026
spot_img

Dark Chocolate | ಆರೋಗ್ಯಕ್ಕೆ ಬೆಸ್ಟ್ ಅಂತ ಹೇಳೋ ಡಾರ್ಕ್ ಚಾಕೊಲೇಟ್ ಮನೆಯಲ್ಲೇ ಮಾಡೋದು ಹೇಗೆ?

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದು ಅಂತ ಎಲ್ಲರೂ ಹೇಳುತ್ತಾರೆ. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಹೆಚ್ಚು ಇದ್ದು, ಹೃದಯದ ಆರೋಗ್ಯಕ್ಕೂ, ಮನಸ್ಸಿನ ಉಲ್ಲಾಸಕ್ಕೂ ಸಹಕಾರಿ. ಮಾರುಕಟ್ಟೆಯಲ್ಲಿ ಸಿಗುವ ಚಾಕೊಲೇಟ್‌ಗಳಲ್ಲಿ ಕೆಲವೊಮ್ಮೆ ಹೆಚ್ಚುವರಿ ಸಕ್ಕರೆ ಮತ್ತು ರಾಸಾಯನಿಕಗಳು ಇರಬಹುದು. ಆದರೆ ಮನೆಲ್ಲೇ ಸ್ವಚ್ಛವಾಗಿ, ನಮ್ಮ ರುಚಿಗೆ ತಕ್ಕಂತೆ ಡಾರ್ಕ್ ಚಾಕೊಲೇಟ್ ಮಾಡಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು:
ಕೋಕೋ ಪೌಡರ್ 1 ಕಪ್, ಕೊಬ್ಬರಿ ಎಣ್ಣೆ ಅಥವಾ ಬೆಣ್ಣೆ ½ ಕಪ್, ಜೇನುತುಪ್ಪ ಅಥವಾ ಬೆಲ್ಲದ ಪುಡಿ 3–4 ಟೇಬಲ್ ಸ್ಪೂನ್, ಸ್ವಲ್ಪ ವನಿಲ್ಲಾ ಎಸೆನ್ಸ್ (ಐಚ್ಛಿಕ).

Step 1
ಮೊದಲು ಒಂದು ಬೌಲ್‌ನಲ್ಲಿ ಕೊಬ್ಬರಿ ಎಣ್ಣೆ ಅಥವಾ ಬೆಣ್ಣೆಯನ್ನು ನಿಧಾನವಾಗಿ ಕರಗಿಸಿಕೊಳ್ಳಿ. ಇದು ಚಾಕೊಲೇಟ್‌ಗೆ ಸಾಫ್ಟ್ ನೆಸ್ ನೀಡುತ್ತದೆ.

Step 2
ಕರಗಿದ ಎಣ್ಣೆಗೆ ಕೋಕೋ ಪೌಡರ್ ಸೇರಿಸಿ ಚೆನ್ನಾಗಿ ಕಲಸಿ. ಗಂಟಾಗದಂತೆ ನಿಧಾನವಾಗಿ ಮಿಶ್ರಣ ಮಾಡಬೇಕು.

Step 3
ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲದ ಪುಡಿ ಸೇರಿಸಿ. ನಿಮ್ಮ ರುಚಿಗೆ ತಕ್ಕಂತೆ ಸಿಹಿ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

Step 4
ಸ್ವಲ್ಪ ವನಿಲ್ಲಾ ಎಸೆನ್ಸ್ ಸೇರಿಸಿದರೆ ಚಾಕೊಲೇಟ್‌ಗೆ ಸುಗಂಧ ಮತ್ತು ರುಚಿ ಹೆಚ್ಚುತ್ತದೆ.

Step 5
ಮಿಶ್ರಣವನ್ನು ಸಣ್ಣ ಮೊಲ್ಡ್ ಅಥವಾ ತಟ್ಟೆಯಲ್ಲಿ ಹಾಕಿ 1–2 ಗಂಟೆ ಫ್ರಿಜ್‌ನಲ್ಲಿ ಇಡಿ. ಗಟ್ಟಿಯಾದ ನಂತರ ಮನೆಯಲ್ಲೇ ಮಾಡಿದ ಆರೋಗ್ಯಕರ ಡಾರ್ಕ್ ಚಾಕೊಲೇಟ್ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !