ಆನ್‌ಲೈನ್‌ ಗೇಮಿಂಗ್‌ ಪ್ರಚಾರ, ನಿಯಂತ್ರಣ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಈ ವಾರದ ಆರಂಭದಲ್ಲಿ ಸಂಸತ್ತಲ್ಲಿ ಈ ಶಾಸನವನ್ನು ಮಂಡಿಸಲಾಗಿತ್ತು. ಲೋಕಸಭೆ ಬುಧವಾರ (ಆಗಸ್ಟ್ 20) ಇದನ್ನು ಅಂಗೀಕರಿಸಿತು ಮತ್ತು ರಾಜ್ಯಸಭೆ ಗುರುವಾರ (ಆಗಸ್ಟ್ 21) ಅನುಮೋದನೆ ನೀಡಿತು. ಇಂದು ಇದು ಶಾಸನವಾಗಿ ಮಾರ್ಪಟ್ಟಿದೆ.

ಈ ಮಸೂದೆಯನ್ನು ಮಂಡಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಅಪಾಯಕಾರಿ ಹಣ ಆಧಾರಿತ ಗೇಮಿಂಗ್ ಅಭ್ಯಾಸಗಳನ್ನು ನಿಷೇಧಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಬಣ್ಣಿಸಿದ್ದರು. ಸಾರ್ವಜನಿಕರ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತಿರುವ ಆನ್‌ಲೈನ್ ಹಣದ ಗೇಮಿಂಗ್‌ನ ವಿನಾಶಕಾರಿ ಪರಿಣಾಮಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದರು.

ಈ ಕಾನೂನು ಎಲ್ಲಾ ಆನ್‌ಲೈನ್ ಮನಿ ಗೇಮಿಂಗ್ ಸೇವೆಗಳನ್ನು ನಿಷೇಧಿಸುತ್ತದೆ. ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿಯವರೆಗೆ ದಂಡ ವಿಧಿಸುತ್ತದೆ. ಆನ್​ಲೈನ್ ಗೇಮಿಂಗ್​ ರೀತಿಯ ವೇದಿಕೆಗಳನ್ನು ಪ್ರಚಾರ ಮಾಡುವವರಿಗೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು 50 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!