ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷದಿಂದ, ತೃಪ್ತಿಯಿಂದ ಬದುಕಬೇಕೆಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮದೇ ಕೆಲವು ದಿನನಿತ್ಯದ ಅಭ್ಯಾಸಗಳು ಅಜ್ಞಾತವಾಗಿ ಸಂತೋಷವನ್ನು ಕಸಿದುಕೊಳ್ಳುತ್ತವೆ. ಹೀಗಾಗಿ, ಖುಷಿಯನ್ನು ಕಳೆದುಕೊಳ್ಳುವಂತಹ ಅಭ್ಯಾಸಗಳನ್ನು ಗುರುತಿಸಿ ಬದಲಾಯಿಸೋದು ಅಗತ್ಯ.
ನಕಾರಾತ್ಮಕತೆಯನ್ನು ಪೋಷಿಸುವುದು
ಯಾವಾಗಲೂ ಕೆಟ್ಟದನ್ನೇ ನಿರೀಕ್ಷಿಸುವುದು, ದೂರು ನೀಡುವ ಸ್ವಭಾವ ಹಾಗೂ ಅತಿಯಾದ ಸ್ವ-ವಿಮರ್ಶೆ ನಿಮ್ಮ ಮನಸ್ಸನ್ನು ಖಾಲಿ ಮಾಡುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವುದು ಸಂತೋಷವನ್ನು ಉಳಿಸಿಕೊಳ್ಳಲು ಮುಖ್ಯ.
ಸ್ವಯಂ ಆರೈಕೆಯನ್ನು ನಿರ್ಲಕ್ಷಿಸುವುದು
ಆರೋಗ್ಯದ ಕಡೆ ಗಮನ ಕೊಡದೆ, ನಿದ್ರೆ–ಆಹಾರ ಬಿಟ್ಟು ಬಿಡುವುದು, ಕೆಲಸಕ್ಕಾಗಿ ವ್ಯಾಯಾಮಕ್ಕೂ ಸಮಯ ಕೊಡದೆ ಬದುಕುವುದು ಸಂತೋಷವನ್ನು ಕಡಿಮೆ ಮಾಡುತ್ತದೆ. ಸ್ವಂತ ಆರೈಕೆಗೆ ಸಮಯ ನೀಡುವುದು ಅವಶ್ಯಕ.
ಅಹಂಕಾರದಿಂದ ಬದುಕುವುದು
ಸ್ವಲ್ಪ ಮಟ್ಟಿನ ಅಹಂಕಾರ ಸಹಜವಾದರೂ, ಹೆಚ್ಚು ಅಹಂಕಾರವು ಅಸಮಾಧಾನಕ್ಕೆ ಕಾರಣವಾಗುತ್ತದೆ. ನಮ್ರತೆ ಮತ್ತು ಸ್ವೀಕಾರ ಮನೋಭಾವ ಬೆಳೆಸಿದರೆ ಜೀವನ ಹಸನಾಗಿರುತ್ತದೆ.
ಸಂಬಂಧಗಳನ್ನು ನಿರ್ಲಕ್ಷಿಸುವುದು
ಕುಟುಂಬ–ಸ್ನೇಹಿತರೊಂದಿಗೆ ಸಮಯ ಕಳೆಯದೆ, ಡಿಜಿಟಲ್ ಜಗತ್ತಿನಲ್ಲಿ ಮಾತ್ರ ಸಿಲುಕಿಕೊಳ್ಳುವುದು ಒಂಟಿತನಕ್ಕೆ ಕಾರಣವಾಗುತ್ತದೆ. ಬಲವಾದ ಸಂಬಂಧಗಳು ಸಂತೋಷ ಮತ್ತು ಆರೋಗ್ಯಕ್ಕೆ ಅವಶ್ಯಕ.
ಸಂತೋಷವನ್ನು ಬೆನ್ನಟ್ಟುವುದು
ಸಂತೋಷವು ಗುರಿ ತಲುಪಿದಾಗ ಸಿಗುವುದಿಲ್ಲ. ಬದಲಾಗಿ, ಪ್ರತಿ ಕ್ಷಣವನ್ನು ಪ್ರಶಂಸಿಸುವ ಮನೋಭಾವದಿಂದ ಬದುಕಿದರೆ ನಿಜವಾದ ಸಂತೋಷವನ್ನು ಅನುಭವಿಸಬಹುದು.
ಕಷ್ಟವನ್ನು ತಪ್ಪಿಸಿಕೊಳ್ಳುವುದು
ಅಸಮಾಧಾನಕರ ಸಂದರ್ಭಗಳನ್ನು ತಪ್ಪಿಸುವುದರಿಂದ ಬೆಳೆಯುವ ಅವಕಾಶ ಕಳೆದುಹೋಗುತ್ತದೆ. ಸವಾಲುಗಳನ್ನು ಎದುರಿಸಿ ನಿಲ್ಲುವುದು ಜೀವನದ ಹಾದಿಯಲ್ಲಿ ಮುಖ್ಯ ಪಾಠ ಕಲಿಸುತ್ತದೆ.
ಅತಿಯಾಗಿ ಜವಾಬ್ದಾರಿ ತೆಗೆದುಕೊಳ್ಳುವುದು
ಎಲ್ಲರಿಗೂ ‘ಹೌದು’ ಎಂದು ಹೇಳುವ ಅಭ್ಯಾಸ ಒತ್ತಡಕ್ಕೆ ಕಾರಣವಾಗುತ್ತದೆ. ಅಗತ್ಯವಿಲ್ಲದ ವಿಷಯಗಳಿಗೆ ‘ಇಲ್ಲ’ ಹೇಳುವುದು ಕಲಿತರೆ, ಜೀವನದಲ್ಲಿ ಶಾಂತಿ ಹೆಚ್ಚುತ್ತದೆ.