ಮಳೆಗಾಲ ಇರಲಿ ಚಳಿಗಾಲ ಇರಲಿ ನಮ್ಮ ದೇಹದಲ್ಲಿ ನೀರಿನ ಕೊರತೆ ಆಗ್ಬಾರ್ದು. ಆದ್ರೆ ಅದರಿಂದ ಉಂಟಾಗೋ ಸಮಸ್ಯೆನೆ ಬೇರೆ. ನಮ್ಮ ದೇಹದ ತಾಪಮಾನವನ್ನು ಸಮತೋಲನದಲ್ಲಿಡುವುದು, ರಕ್ತದ ಹರಿವನ್ನು ಸುಗಮಗೊಳಿಸುವುದು ಹಾಗೂ ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಸುವುದು ಈ ಎಲ್ಲ ಕೆಲಸಗಳನ್ನು ನೀರು ಮಾಡುತ್ತದೆ. ಆದರೆ ಹಲವರು ದಿನವಿಡೀ ಸಾಕಷ್ಟು ನೀರು ಕುಡಿಯುವುದಿಲ್ಲ. ಇದರಿಂದ ನಿಧಾನವಾಗಿ ನಿರ್ಜಲೀಕರಣ ಉಂಟಾಗುತ್ತದೆ. ದೇಹವು ಇಂತಹ ಸಂದರ್ಭಗಳಲ್ಲಿ ಕೆಲವು ಸ್ಪಷ್ಟ ಸಂಕೇತಗಳನ್ನು ತೋರಿಸುತ್ತದೆ. ಅವುಗಳನ್ನು ಗಮನಿಸುವುದು ಬಹಳ ಮುಖ್ಯ.
ಆಗಾಗ್ಗೆ ತಲೆನೋವು
ದೇಹದಲ್ಲಿ ನೀರು ಕಡಿಮೆಯಾದಾಗ ಮೆದುಳಿಗೆ ತಕ್ಕಮಟ್ಟಿನ ರಕ್ತದ ಹರಿವು ತಲುಪುವುದಿಲ್ಲ. ಇದರಿಂದ ತಲೆತಿರುಗುವಿಕೆ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.
ಚರ್ಮದ ಶುಷ್ಕತೆ
ನೀರಿನ ಕೊರತೆಯ ಪರಿಣಾಮ ಚರ್ಮದ ಮೇಲೂ ಗೋಚರಿಸುತ್ತದೆ. ಚರ್ಮ ನಿರಂತರವಾಗಿ ಒಣಗುವುದು, ನಿರ್ಜೀವವಾಗುವುದು ಮತ್ತು ಒರಟಾಗುವುದು ದೇಹಕ್ಕೆ ನೀರಿನ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.
ದಣಿವು ಮತ್ತು ಆಲಸ್ಯ
ನಿರ್ಜಲೀಕರಣದಿಂದ ದೇಹದಲ್ಲಿ ಶಕ್ತಿ ಮಟ್ಟ ಕುಸಿಯುತ್ತದೆ. ಸ್ವಲ್ಪ ಕೆಲಸ ಮಾಡಿದರೂ ದಣಿವು, ದೌರ್ಬಲ್ಯ ಹಾಗೂ ಆಲಸ್ಯ ಉಂಟಾಗುತ್ತದೆ.
ಮೂತ್ರದ ಗಾಢ ಬಣ್ಣ
ಸಾಮಾನ್ಯವಾಗಿ ಮೂತ್ರದ ಬಣ್ಣ ತಿಳಿಯಾಗಿ ಕಾಣಿಸಿಕೊಳ್ಳುತ್ತದೆ. ಆದರೆ ದೇಹದಲ್ಲಿ ನೀರಿನ ಕೊರತೆಯಾಗಿದರೆ, ಮೂತ್ರವು ಹಳದಿ ಅಥವಾ ಗಾಢ ಬಣ್ಣದಲ್ಲಿರುತ್ತದೆ.
ಬಾಯಿ ಮತ್ತು ತುಟಿಗಳ ಒಣಗುವುದು
ನೀರಿನ ಕೊರತೆಯ ಮೊದಲ ಪರಿಣಾಮ ಬಾಯಿ ಹಾಗೂ ತುಟಿಗಳ ಮೇಲೆ ಕಾಣಿಸುತ್ತದೆ. ಬಾಯಿ ಒಣಗುವುದು ಮತ್ತು ತುಟಿಗಳು ಬಿರುಕು ಬಿಡುವುದು ಇದಕ್ಕೆ ಪ್ರಮುಖ ಲಕ್ಷಣ.
ಸ್ನಾಯು ಸೆಳೆತ
ನೀರಿನ ಕೊರತೆಯಿಂದ ಎಲೆಕ್ಟ್ರೋಲೈಟ್‌ಗಳ ಸಮತೋಲನ ಕದಡಲ್ಪಡುತ್ತದೆ. ಇದರಿಂದ ಸ್ನಾಯು ಸೆಳೆತ ಹಾಗೂ ಒತ್ತಡ ಉಂಟಾಗುತ್ತದೆ.
ನೀರಿನ ಕೊರತೆಯನ್ನು ತಡೆಯುವುದು ಹೇಗೆ?
ದಿನವಿಡೀ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯುವುದು.
ಕಲ್ಲಂಗಡಿ, ಸೌತೆಕಾಯಿ ಹಾಗೂ ಎಳನೀರು ಸೇವಿಸುವುದು.
ಸಮಯ ಸಮಯಕ್ಕೆ ನೀರು ಕುಡಿಯುವುದು.
ದೇಹದಲ್ಲಿ ನೀರಿನ ಕೊರತೆ ಎಂದರೆ ಅದು ಕೇವಲ ದಾಹವಾಗುವುದಷ್ಟೇ ಅಲ್ಲ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ದಿನನಿತ್ಯದಲ್ಲಿ ಸಾಕಷ್ಟು ನೀರು ಕುಡಿಯುವುದು ಮತ್ತು ದೇಹವನ್ನು ಹೈಡ್ರೇಟ್ ಇಡುವುದು ಆರೋಗ್ಯ ಕಾಪಾಡಿಕೊಳ್ಳುವ ಪ್ರಮುಖ ಕ್ರಮವಾಗಿದೆ.