ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದರೂ, ಸುಪ್ರೀಂ ಕೋರ್ಟ್ನ ತೀರ್ಪು ಅವರ ಮೇಲೆ ಮತ್ತೆ ಜೈಲು ಬಾಗಿಲು ತೆರೆದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ದರ್ಶನ್, ಜಾಮೀನು ಪಡೆದ ನಂತರ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಸಂಬಂಧ ಜೈಲು ಅಧೀಕ್ಷಕರು ಮನವಿ ಸಲ್ಲಿಸಿದ್ದು, ಎಸ್ಪಿಪಿ ಮೂಲಕ ಅರ್ಜಿ ಪ್ರಕ್ರಿಯೆಯೂ ನಡೆದಿದೆ.
ಆದರೆ, ಆಗಸ್ಟ್ 23ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಆರೋಪಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸದೆ ಇದ್ದ ಕಾರಣ, ಬಳ್ಳಾರಿ ಶಿಫ್ಟಿಂಗ್ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಲಾಗಿದೆ. ಇದರ ಪರಿಣಾಮವಾಗಿ, ದರ್ಶನ್ ಭವಿಷ್ಯದ ಸೆರೆಮನೆ ವಾಸ ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿದೆ.
ಸುದೀರ್ಘವಾಗಿ ಜಾಮೀನು ಪಡೆದ ನಂತರ ಹೊರಗೆ ತಿರುಗಾಡುತ್ತಿದ್ದ ದರ್ಶನ್ ಅವರಿಗೆ, ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮತ್ತೊಮ್ಮೆ ಬಂಧನದ ಬಾಗಿಲನ್ನು ತೆರೆಯಿತು. ಈಗಾಗಲೇ ಜೈಲು ಆಡಳಿತವು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ತೀರ್ಮಾನಿಸಿಕೊಂಡಿದ್ದು, ಅಂತಿಮ ನಿರ್ಧಾರಕ್ಕಾಗಿ ಕೋರ್ಟ್ನ ಮುಂದಿನ ವಿಚಾರಣೆಯತ್ತ ಎಲ್ಲರ ಕಣ್ಣು ತಿರುಗಿದೆ.
ದರ್ಶನ್ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಬಳ್ಳಾರಿ ಜೈಲು ಶಿಫ್ಟಿಂಗ್ ಕುರಿತು ಆಗಸ್ಟ್ 30ರ ವಿಚಾರಣೆ ನಿರ್ಣಾಯಕವಾಗಲಿದೆ. ವಕೀಲರ ತೀರ್ಮಾನ ಹಾಗೂ ಕೋರ್ಟ್ ಆದೇಶದ ಮೇಲೆ ದರ್ಶನ್ ಭವಿಷ್ಯದ ಜೈಲು ವಾಸ ನಿಂತಿದೆ.