ಸಂಜೆ ಆಗ್ತಿದಂತೆ ಬಿಸಿಬಿಸಿ ತಿಂಡಿಗಳು ಮನೆಯಲ್ಲಿಯೇ ಸವಿಯಲು ಎಲ್ಲರಿಗೂ ಇಷ್ಟ. ಈ ವೇಳೆ, ಮನೆಯಲ್ಲಿಯೇ ಚಿಕನ್ ಪಕೋಡ ತಯಾರಿಸುವುದು ಎಲ್ಲರಿಗು ಹೊಸ ರುಚಿ ಅನುಭವ ನೀಡಬಹುದು. ನೀವೂ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು
ಚಿಕನ್ – ಅರ್ಧ ಕೆಜಿ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ¼ ಟೀಸ್ಪೂನ್
ನಿಂಬೆ ರಸ – ಅರ್ಧ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಖಾರದ ಪುಡಿ – 2 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲ – 1 ½ ಟೀಸ್ಪೂನ್
ಕಾಳು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಚಾಟ್ ಮಸಾಲ – ಅರ್ಧ ಟೀಸ್ಪೂನ್
ಕತ್ತರಿಸಿದ ಹಸಿಮೆಣಸಿನಕಾಯಿ – 3
ಕತ್ತರಿಸಿದ ಕರಿಬೇವು – 2 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಪುದೀನಾ ಎಲೆಗಳು – ಸ್ವಲ್ಪ
ಅಕ್ಕಿ ಹಿಟ್ಟು – 2 ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಎಣ್ಣೆ – ಅರ್ಧ ಟೀಸ್ಪೂನ್ (ಮಿಶ್ರಣಕ್ಕೆ)
ಮೊಟ್ಟೆ – 1
ಎಣ್ಣೆ – ಡೀಪ್ ಫ್ರೈ ಮಾಡಲು ಬೇಕಾದಷ್ಟು
ಮಾಡುವ ವಿಧಾನ
ಮೊದಲಿಗೆ ಚಿಕ್ಕ ಚಿಕ್ಕ ತುಂಡುಗಳಲ್ಲಿ ಕತ್ತರಿಸಿದ ಚಿಕನ್ ಪೀಸ್ಗಳಿಗೆ ಉಪ್ಪು, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಕಾಳು ಮೆಣಸು ಪುಡಿ, ಚಾಟ್ ಮಸಾಲ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಕಲಸಿ.
ಕೊತ್ತಂಬರಿ ಸೊಪ್ಪು, ಕರಿಬೇವು, ಪುದೀನ ಎಲೆಗಳು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್ ಮತ್ತು ಮೊಟ್ಟೆಯನ್ನು ಸೇರಿಸಿ, ಕೈಗಳಿಂದ ಎಲ್ಲ ಪದಾರ್ಥಗಳು ಚಿಕನ್ ತುಂಡುಗಳಿಗೆ ಹತ್ತಿಕೊಳ್ಳುವಂತೆ ಮಿಶ್ರಣ ಮಾಡಿ. ನಂತರ ಪಾತ್ರೆಯನ್ನು ಮುಚ್ಚಿ ಒಂದು ಗಂಟೆ ಮ್ಯಾರಿನೇಟ್ ಮಾಡಲು ಬಿಡಿ.
ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಹಾಕಿ, ಗೋಲ್ಡ್ನ್ ಬಣ್ಣ ಬರುವವರೆಗೆ ಬೇಯಿಸಿ.