ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಾರ್ಟ್ಮೆಂಟ್ನ ಲಿಫ್ಟ್ನಲ್ಲಿ ಸಿಲುಕಿ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನವ್ಸಾರಿ ಜಿಲ್ಲೆಯ ವಿಜಲ್ಪುರ್ ಪ್ರದೇಶದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ನೀರವ್ ಸ್ಕ್ವೇರ್ ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಮಹಡಿಯಿಂದ ಕೆಳಗೆ ಹೋಗುವಾಗ ಬಾಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ. ನಂತರ ಲಿಫ್ಟ್ ಅನ್ನು ಕಟ್ಟರ್‌ನಿಂದ ಕತ್ತರಿಸಿ ಬಾಲಕನನ್ನು ಹೊರ ತೆಗೆಯಲಾಯಿತು.
ತಾಯಿ ಮನೆಗೆ ಬೀಗ ಹಾಕುತ್ತಿರುವಾಗ, ಬಾಲಕ ಲಿಫ್ಟ್ ಒಳಗೆ ಪ್ರವೇಶಿಸಿದ್ದ, ಆ ಸಮಯದಲ್ಲಿ ಲಿಫ್ಟ್ ಸ್ಟಾರ್ಟ್ ಆಗಿ ಬಾಲಕ ಅದರಲ್ಲಿ ಸಿಲುಕಿಕೊಂಡಿದ್ದ.ತಾಯಿ ಕೂಡ ಲಿಫ್ಟ್ ನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದರು, ಲಿಫ್ಟ್ ಎರಡನೇ ಮಹಡಿಯಿಂದ ಕೆಳಗೆ ಇಳಿಯುತ್ತಿತ್ತು ಮತ್ತು ಬಾಲಕನ ದೇಹದ ಒಂದು ಭಾಗ ಲಿಫ್ಟ್‌ನಲ್ಲಿ ಸಿಲುಕಿಕೊಂಡಿತ್ತು.ಘಟನೆಯ ನಂತರ ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಒಂದು ಗಂಟೆ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ, ಅಗ್ನಿಶಾಮಕ ಸಿಬ್ಬಂದಿ ಕಟ್ಟರ್ ಯಂತ್ರದ ಮೂಲಕ ಲಿಫ್ಟ್ ಅನ್ನು ಮುರಿದು ಬಾಲಕನನ್ನು ಹೊರತೆಗೆದರು. ಚಿಕಿತ್ಸೆಗಾಗಿ ನಾಗರಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ವೈದ್ಯರು ಅವನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.
ನವಸಾರಿ ಅಗ್ನಿಶಾಮಕ ಇಲಾಖೆಯ ಕಟ್ಟರ್ ಯಂತ್ರದಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಮತ್ತು ಸಂಬಂಧಿತ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.