ನಮ್ಮ ಸೈನಿಕರು ಉಗ್ರರನ್ನು ಧರ್ಮ ನೋಡಿ ಅಲ್ಲ, ಉದ್ದೇಶದ ಆಧಾರದ ಮೇಲೆ ಹತ್ಯೆ ಮಾಡಿದರು: ರಾಜನಾಥ್​ ಸಿಂಗ್​

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಮ್ಮ ಸೈನಿಕರು ಭಯೋತ್ಪಾದಕರನ್ನು ಅವರ ಧರ್ಮದ ಆಧಾರದ ಮೇಲೆ ಕೊಂದಿಲ್ಲ, ಬದಲಿಗೆ ಅವರ ಅಮಾನವೀಯ ಕೃತ್ಯಕ್ಕಾಗಿ ಕೊಂದಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದಾರೆ.

ಇಂದು ಜೋಧಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಹಲ್ಗಾಮ್​ ಭಯೋತ್ಪಾದಕ ದಾಳಿ ಪ್ರತಿಕಾರವಾಗಿ ಮಿಲಿಟರಿ ಕಾರ್ಯಾಚರಣೆ ವೇಳೆ ಗಡಿ ಪ್ರದೇಶದ ಜನರು ಆಡಳಿತವನ್ನು ಬೆಂಬಲಿಸಿದರು. ಮೂರು ಸೇನಾಪಡೆಗಳ ಮುಖ್ಯಸ್ಥರು ಕೂಡ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಂಡರು , ನಾವು ಯಾವುದೇ ಕಾರ್ಯಾಚರಣೆಗೆ ಸಿದ್ದರಾಗಿರುವುದಾಗಿ ತಿಳಿಸಿದರು. ಪ್ರಧಾನಿ ಮೋದಿ ಅವರು, ಅಗತ್ಯವಾದ ಎಲ್ಲಾ ನಿರ್ದೇಶನ ನೀಡಿದರು ಎಂದರು.

ಆಪರೇಷನ್​ ಸಿಂದೂರ್​ ಕಾರ್ಯಾಚರಣೆ ವೇಳೆ, ನಮ್ಮ ಪಡೆಗಳು ಎಲ್ಲ ಗಡಿಗಳಲ್ಲಿ ಅಲ್ಲಿನ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡಿದ್ದವು. ಭಾರತವು ತನ್ನ ಗಡಿಯೊಳಗಿನ ಜನರನ್ನು ಸದಸ್ಯರೆಂದು ಪರಿಗಣಿಸುವುದಲ್ಲದೇ, ಪ್ರಪಂಚದಾದ್ಯಂತದ ಜನರನ್ನು ತನ್ನ ಕುಟುಂಬದ ಭಾಗವೆಂದು ಪರಿಗಣಿಸುವ ದೇಶವಾಗಿದ್ದು, ವಸುಧೈವ ಕುಟುಂಬಕಂ ಎಂಬ ಸಂದೇಶ ಹರಡುತ್ತದೆ. ಭಾರತವೂ ಧರ್ಮ ಅಥವಾ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಭಯೋತ್ಪಾದಕರು ಅವರ ಧರ್ಮ ನೋಡಿ ಹತ್ಯೆ ಮಾಡಿದರು. ಆದರೆ, ನಮ್ಮ ಯೋಧರು ಧರ್ಮ ನೋಡಿ ಅಲ್ಲ, ಅವರ ಉದ್ದೇಶ ನೋಡಿ ಹತ್ಯೆ ಮಾಡಿದರು ಎಂದರು.

ಶಿಕ್ಷಣ ವಲಯದಲ್ಲಿನ ನರೇಂದ್ರ ಮೋದಿ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಗಮನಾರ್ಹ ಪರಿವರ್ತನೆ ತರಲಾಗಿದೆ. ನಮ್ಮ ಸಮಯ ಮತ್ತು ಇಂದಿನ ಶಿಕ್ಷಣದ ನಡುವೆ ಗಣನೀಯ ಬದಲಾವಣೆ ಕಂಡಿದೆ. ಇಂದು ನಮ್ಮ ಮಕ್ಕಳು ಇಂಟರ್​ನೆಟ್​ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಸುಲಭ ವಿಷಯವಲ್ಲ. ಅನೇಕ ಆಯೋಗಗಳನ್ನು ಸ್ಥಾಪಿಸಿ, ಶಿಫಾರಸುಗಳನ್ನು ನೀಡಲಾಗುವುದು ಎಂದರು.

ಭಾರತದ ಶಿಕ್ಷಣ ಕ್ಷೇತ್ರವೂ ನಿಜವಾದ ಬಲವಾಗಿದೆ ಎಂಬುದು ಕಾಣುತ್ತಿದೆ. ಇದು ನಿಜವಾದ ಬದಲಾವಣೆಯಾಗಿದ್ದು, ಭಾರತದ ಭವಿಷ್ಯವಾಗಿದೆ. ಇದು ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!