ಮೇಷ.
ಮನಸ್ಸು ಚಂಚಲ. ಯಾವುದೇ ವಿಷಯದಲ್ಲಿ ಸ್ಥಿರವಾಗಿ ನಿಲ್ಲದು. ಕಾರ್ಯಕ್ಕೆ ಅಡ್ಡಿ. ನಿಮ್ಮ ಸವಿಮಾತು ಇತರರನ್ನು ಆಕರ್ಷಿಸಬಹುದು.
ವೃಷಭ
ಆತ್ಮವಿಶ್ವಾಸ ಹೆಚ್ಚು. ಕಾರ್ಯ ಸಂಪೂರ್ಣ. ಕುಟುಂಬ ಸದಸ್ಯರ ಸಲಹೆ ನಿರ್ಲಕ್ಷಿಸದಿರಿ. ಆರೋಗ್ಯ ನಿಧಾನಗತಿಯ ಚೇತರಿಕೆ. ಅವಸರ ಮಾಡದಿರಿ.
ಮಿಥುನ
ಉದಾಸೀನತೆ ನಿಮ್ಮ ದಿನ ಹಾಳು ಮಾಡಲು ಅವಕಾಶ ಕೊಡದಿರಿ. ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಸಮತೋಲನ ಇರಲಿ.
ಕಟಕ
ದಿನದ ಅಂತ್ಯಕ್ಕೆ ಅನಿರೀಕ್ಷಿತವಾದುದು ಸಂಭವಿಸಬಹುದು. ಸದಾ ಹಣದ ಹಿಂದೆ ಓಡದಿರಿ. ನಿರಾಶೆ ಆದೀತು. ಕೌಟುಂಬಿಕ ಅಶಾಂತಿ.
ಸಿಂಹ
ಸಂವಹನ ಕಲೆ ಯಿಂದ ಬೇಕಾದುದನ್ನು ಸಾಽಸುವಿರಿ. ವೃತ್ತಿಯಲ್ಲಿ ಸೌಹಾರ್ದ ಪರಿಸರ. ದೈಹಿಕ ನೋವು ಇಂದು ಶಮನ ಕಾಣಲಿದೆ.
ಕನ್ಯಾ
ನಿಮ್ಮ ಇಷ್ಟಕ್ಕೆ ವಿರುದ್ಧವಾದುದು ಆಗಬಹುದು. ಬದುಕಿನ ಮೇಲೆ ಹಿಡಿತ ಸಾಽಸಿ. ಹಣದ ಸಮಸ್ಯೆಗೆ ಪರಿಹಾರ ಸಿಗಲಿದೆ.
ತುಲಾ
ಕುಟುಂಬದ ಹಿತ ಗಮನಿಸಿ. ಅವರಿಗೆ ನಿಮ್ಮ ಭಾವನಾತ್ಮಕ ಬೆಂಬಲದ ಅಗತ್ಯವಿದೆ. ಆರ್ಥಿಕ ಸುಸ್ಥಿರ. ಪ್ರೀತಿಯ ವಿಷಯದಲ್ಲಿ ಸ-ಲತೆ.
ವೃಶ್ಚಿಕ
ಸದಾ ಪರಿಸ್ಥಿತಿ ದೂರುತ್ತಾ ಕೂರಬೇಡಿ. ಕೆಲಸದ ಮೇಲೆ ಗಮನ ಕೊಡಿ. ವೃತ್ತಿ ಮತ್ತು ಖಾಸಗಿ ವಿಚಾರದಲ್ಲಿ ಅಹಿತಕರ ಬೆಳವಣಿಗೆ. ಧನವ್ಯಯ.
ಧನು
ಸಣ್ಣ ಕಾರ್ಯವನ್ನೂ ಆನಂದಿಸಲು ಕಲಿಯಿರಿ. ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದಲ್ಲಿ ಏರುಪೇರು ಆದೀತು. ಪ್ರೀತಿಯಲ್ಲಿ ಪ್ರತಿಕೂಲ ಬೆಳವಣಿಗೆ.
ಮಕರ
ಪ್ರಮುಖ ಬೆಳವಣಿಗೆ ಸಂಭವಿಸಲಿದೆ. ಹಳೆ ವಿಷಯ ಕೆದಕದಿರಿ. ಅದು ನಿಮಗೆ ಹಿತ ತರದು. ನಿಮ್ಮನ್ನು ಕೆಲವರು ದುರ್ಬಳಕೆ ಮಾಡುವರು.
ಕುಂಭ
ನಿಮ್ಮನ್ನು ಕಾಡುತ್ತಿದ್ದ ಅಡ್ಡಿಗಳು ಇಂದು ನಿವಾರಣೆ. ಹಲವು ವಿಚಾರಗಳಿಂದ ಮನಸ್ಸು ಗೊಂದಲ. ವಾಗ್ವಾದದಿಂದ ದೂರವಿರುವುದೊಳಿತು.
ಮೀನ
ನಿಮಗೆ ಒಗ್ಗದ ಹೊಸ ವಿಷಯಕ್ಕೆ ಕೈ ಹಾಕದಿರಿ. ಆದಾಯ ಹೆಚ್ಚಿಸುವ ಪ್ರಯತ್ನ ಹೆಚ್ಚು -ಲ ನೀಡದು. ಆಪ್ತರೊಬ್ಬರ ಭೇಟಿಯಿಂದ ಸಮಾಧಾನ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ