ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮವು ಮನೆ ಮಾಡಿದೆ. ಹಬ್ಬಕ್ಕೆ ಎಲ್ಲೆಡೆ ಸಿದ್ಧತೆಗಳು ಜೋರಾಗಿದ್ದು, ಮಾರುಕಟ್ಟೆಗಳಲ್ಲಿ ವಿಶೇಷ ಚಟುವಟಿಕೆ ಕಂಡುಬರುತ್ತಿದೆ. ಜನರು ಪೂಜಾ ಸಾಮಗ್ರಿಗಳು, ಹಣ್ಣು-ಹೂವುಗಳು, ಮತ್ತು ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.
ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರಗಳು ನಡೆಯುತ್ತಿವೆ. ಅದ್ರಲ್ಲೂ ಇಂದಿನ ಹಬ್ಬಕ್ಕೆ ಸೋಮವಾರದಿಂದಲೇ ತಯಾರಿ ಆರಂಭ ಆಗಿದ್ದು, ಕೆಆರ್ ಮಾರ್ಕೆಟ್ ಸೋಮವಾರ ಸಂಜೆಯಿಂದಲೇ ಪುಲ್ ರಶ್ ಆಗಿದೆ. ಜನ ಹಬ್ಬದ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆ ಹಣ್ಣುಗಳ ಬೆಲೆ ಅಷ್ಟಾಗಿ ಏರಿಕೆ ಕಂಡಿಲ್ಲ. ಆದ್ರೆ ಹೂವುಗಳ ಬೆಲೆ ಮಾತ್ರ ಮಳೆ ಹಾಗೂ ಹಬ್ಬದಿಂದ ವಿಪರೀತ ಗಗನಕ್ಕೇರಿದೆ.
ಒಟ್ಟಾರೆ, ಈ ಹಬ್ಬವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ, ಭಕ್ತಿ ಮತ್ತು ಸಂಭ್ರಮದ ವಾತಾವರಣವನ್ನು ತರುತ್ತಿದೆ.