February 9, 2026
Monday, February 9, 2026
spot_img

ಚಿನ್ನಸ್ವಾಮಿಯಲ್ಲಿ ಮತ್ತೆ ಆರ್‌ಸಿಬಿ ಮ್ಯಾಚ್‌? ಸಭೆ ಬಳಿಕ ಅಂತಿಮ ನಿರ್ಧಾರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಕಳೆದ ವರ್ಷ ಆರ್‌ಸಿಬಿ ಫೈನಲ್‌ ಮ್ಯಾಚ್‌ ನಂತರ ಉಂಟಾದ ಆರ್‌ಸಿಬಿ ಪ್ಲೇಯರ್ಸ್‌ ರ್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿದ್ದು, ಹತ್ತಾರು ಮಂದಿ ಪ್ರಾಣಬಿಟ್ಟಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಮ್ಯಾಚ್‌ ನಡೆಸುವ ಬಗ್ಗೆ ಇನ್ನೂ ಯಾವ ತೀರ್ಮಾನವೂ ಆಗಿಲ್ಲ.ಆರ್‌ಸಿಬಿ ಮ್ಯಾಚ್‌ ಎಂದಾಗ ಖುಷಿ ಹಾಗೂ ಎಕ್ಸೈಟ್‌ಮೆಂಟ್‌ ಜತೆ ಭಯವೂ ಇದೆ.

ಬೆಂಗಳೂರಿನಲ್ಲಿ ಆರ್‌ಸಿಬಿ ಮ್ಯಾಚ್‌ ನಡೆಯತ್ತೋ ಇಲ್ಲವೋ ಅನ್ನೋದು ಬುಧವಾರದ ಸಭೆ ನಂತರ ಗೊತ್ತಾಗಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್‌ ಕ್ರಿಕೆಟ್‌ ಅಸೋಸಿಯೇಷನ್‌ ಜತೆ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಚರ್ಚೆಯಾಗಲಿದೆ. ಇದಾದ ನಂತರವೇ ಮ್ಯಾಚ್‌ ನಡೆಯುತ್ತದಾ ಇಲ್ಲವಾ ಎಂದು ಹೇಳಬಹುದು ಎಂದಿದ್ದಾರೆ. ಏನಾಗೋದಿಲ್ಲ ಬೆಂಗಳೂರಿನಲ್ಲಿ ಮ್ಯಾಚ್‌ ನಡೀಬೇಕು ಎಂದು ಫ್ಯಾನ್ಸ್‌ ಒತ್ತಾಯ ಮಾಡ್ತಿದ್ದಾರೆ. ಆದರೆ ಮನರಂಜನೆ, ಫ್ಯಾನ್ಸ್‌ ಆಸೆಯ ಬಗ್ಗೆ ಮಾತ್ರ ಯೋಚನೆ ಮಾಡೋಕೆ ಆಗತ್ತಾ? ಜನರ ಹಿತಾಸಕ್ತಿ ಮನಸಿನಲ್ಲಿದೆ, ಆದರೆ ಸುರಕ್ಷತೆಯನ್ನೂ ನೋಡಬೇಕಲ್ವಾ? ಕಾಲ್ತುಳಿತದಂತಹ ಪ್ರಕರಣ ಮತ್ತೆ ರಿಪೀಟ್‌ ಆದ್ರೆ ಯಾರು ಹೊಣೆ?

ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಸಮಿತಿಯು ಶಿಫಾರಸು ನೀಡಿತ್ತು. ಅದನ್ನು ಪಾಲಿಸಬೇಕು ಎಂದು ಹೇಳಿದ್ದೇವೆ. ಸರ್ಕಾರದಿಂದಲೂ ಜಿಬಿಎ, ಪೊಲೀಸ್ ಆಯುಕ್ತರ ಸಮಿತಿ ರಚಿಸಿದ್ದೆವು. ಆ ಸಮಿತಿಯು ಒಂದಷ್ಟು ಶಿಫಾರಸು ಮಾಡಿದೆ. ಐಪಿಎಲ್ ಮ್ಯಾಚ್​ಗಳು ಬರುತ್ತಿವೆ‌. ನಮ್ಮ ಕಡೆಯಿಂದ ಕ್ಲಿಯರೆನ್ಸ್ ಬೇಕಿದೆ. ಬುಧವಾರ ನಾನು ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕು, ಅವರಿಗೆ ಏನು ಸೂಚನೆ ಕೊಡಬೇಕು ಎಂಬುದರ ಬಗ್ಗೆ ಅಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ ಜೊತೆಗೂ ಚರ್ಚಿಸುತ್ತೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !