September 28, 2026
Monday, September 28, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 23 | ಬೆಳಗಿನ ಉಪಹಾರಕ್ಕೆ ಸೂಪರ್‌ ಬೀಟ್ರೂಟ್ ಪಡ್ಡು: ರುಚಿ ಜೊತೆಗೆ ಆರೋಗ್ಯವೂ ನಿಮ್ಮದಾಗಲಿ

ಬೆಳಗಿನ ಉಪಹಾರಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುವ ತಿನಿಸು ಬೇಕೆಂದರೆ ಬೀಟ್ರೂಟ್ ಪಡ್ಡು (ಅಪ್ಪೆ) ಟ್ರೈ ಮಾಡಿ. ಬೀಟ್ರೂಟ್‌ನಲ್ಲಿರುವ ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಮಿನ್‌ಗಳು ದೇಹಕ್ಕೆ ಪೌಷ್ಟಿಕಾಂಶ ಒದಗಿಸುತ್ತವೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಬೆಳಗಿನ ಉಪಹಾರಕ್ಕೆ ಸೂಕ್ತ.

ಬೇಕಾಗುವ ಸಾಮಗ್ರಿಗಳು

ಇಡ್ಲಿ/ದೋಸೆ ಹಿಟ್ಟು – 1½ ಕಪ್
ತುರಿದ ಬೀಟ್ರೂಟ್ – 1 ಕಪ್
ಸಣ್ಣದಾಗಿ ಹೆಚ್ಚಿದ ಈರುಳ್ಳಿ – ½ ಕಪ್
ಹಸಿಮೆಣಸಿನಕಾಯಿ – 2
ಜೀರಿಗೆ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ತುಪ್ಪ – ಅಗತ್ಯಕ್ಕೆ

ಮಾಡುವ ವಿಧಾನ

ಇಡ್ಲಿ ಅಥವಾ ದೋಸೆ ಹಿಟ್ಟಿಗೆ ತುರಿದ ಬೀಟ್ರೂಟ್, ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಪಡ್ಡು ಕಾವಲಿಯ ಪ್ರತಿಯೊಂದು ಗುಂಡಿಗೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಚ್ಚಿ ಬಿಸಿ ಮಾಡಿ.

ಪ್ರತಿ ಗುಂಡಿಗೂ ಸುಮಾರು ಮುಕ್ಕಾಲು ಭಾಗದಷ್ಟು ಹಿಟ್ಟನ್ನು ಸುರಿದು, ಮುಚ್ಚಳ ಹಾಕಿ 2–3 ನಿಮಿಷ ಬೇಯಿಸಿ.

ಒಂದು ಬದಿ ಗೋಲ್ಡನ್ ಬ್ರೌನ್ ಆದ ಬಳಿಕ ತಿರುಗಿಸಿ, ಇನ್ನೊಂದು ಬದಿಯನ್ನೂ ಚೆನ್ನಾಗಿ ಬೇಯಿಸಿ.

ಬಿಸಿ ಬಿಸಿ ಬೀಟ್ರೂಟ್ ಪಡ್ಡುವನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಪುದೀನಾ ಚಟ್ನಿಯೊಂದಿಗೆ ಸವಿದರೆ ಇನ್ನಷ್ಟು ರುಚಿಯಾಗಿರುತ್ತದೆ.

Must Read