ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಕಳ್ಳನೊಬ್ಬ ಕಂಠಪೂರ್ತಿ ಕುಡಿದು ಕಳ್ಳತನ ಮಾಡಲು ಹೋಗಿದ್ದ ಮನೆಯಲ್ಲಿಯೇ ಬೆಡ್‌ಶೀಟ್ ಹೊದ್ದು ಬೆಚ್ಚಗೆ ಮಲಗಿದ್ದಾನೆ.
ಪ್ರೇಮನಾಥ್ ಎನ್ನುವವರ ಮನೆಗೆ ಇಬ್ಬರು ಕಳ್ಳರು ಬಂದಿದ್ದರು. ಮನೆಯ ಮೇಲ್ಛಾವಣಿ ತೆಗೆದು ಒಳಕ್ಕೆ ಬಂದಿದ್ದರು. ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ಹಣ ಎಲ್ಲವನ್ನೂ ಕದ್ದಿದ್ದಾರೆ. ಒಬ್ಬ ಕಳ್ಳ ಎಲ್ಲವನ್ನೂ ಎತ್ತುಕೊಂಡು ಬಂದ ದಾರಿಯಲ್ಲೇ ವಾಪಾಸ್ ಹೋಗಿದ್ದಾನೆ.
ಆದರೆ ಎಣ್ಣೆ ಏಟಲ್ಲಿದ್ದ ಇನ್ನೊಬ್ಬ ಕಳ್ಳ ಅಲ್ಲಿಯೇ ಬೆಡ್‌ಶೀಟ್ ತೆಗೆದುಕೊಂಡು ನೆಲದಲ್ಲಿ ಮಲಗಿದ್ದಾನೆ. ರಾತ್ರಿ ಮನೆಗೆ ವಾಪಾಸಾದ ಪ್ರೇಮನಾಥ್ ಕಳ್ಳನನ್ನು ನೋಡಿ ಶಾಕ್ ಆಗಿದ್ದಾರೆ. ತಕ್ಷಣವೇ ಪೊಲೀಸರನ್ನು ಕರೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಇನ್ನೊಬ್ಬ ಕಳ್ಳನನ್ನು ಹುಡುಕಲಾಗುತ್ತಿದೆ.



