February 9, 2026
Monday, February 9, 2026
spot_img

37 ವರ್ಷದಲ್ಲಿ ಮೊದಲ ಬಾರಿಗೆ ಮಿಲಿಟರಿ ಸಭೆಗೆ ಖಮೇನಿ ಗೈರು: ಇದು ಅಮೆರಿಕದ ದಾಳಿಯ ಭಯವೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ ಹಾಗೂ ಇರಾನ್‌ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ತೆಹ್ರಾನ್‌ ಕರಾವಳಿ ಪ್ರದೇಶದಲ್ಲಿ ಯುಎಸ್‌ ಯುದ್ದನೌಕೆಗಳು ಬೀಡುಬಿಟ್ಟಿದೆ.

ಈ ಬೆನ್ನಲ್ಲೆ, ಇರಾನ್‌ ನ ಸುಪ್ರೀಂ ಲೀಡರ್‌ ಅಯತುಲ್ಲಾ ಖಮೇನಿ ಅಧಿಕಾರ ವಹಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ವಾರ್ಷಿಕವಾಗಿ ಏರ್ ಚೀಫ್‌ ಕಮಾಂಡರ್‌ ಗಳೊಂದಿಗೆ ನಡೆಯುವ ಮಹತ್ವದ ಮಿಲಿಟರಿ ಸಭೆಗೆ ಗೈರಾಗಿದ್ದಾರೆ.

1989ರಲ್ಲಿ ಇಸ್ಲಾಮಿಕ್ ಗಣರಾಜ್ಯ ಇರಾನ್‌ ನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಿರಂತರ ಯಾವ ಒಂದು ಮಿಲಿಟರಿ ಸಭೆಯಿಂದ ದೂರ ಉಳಿಯದ ಖಮೇನಿ, ಮೊದಲ ಬಾರಿಗೆ ಫೆ.8ರಂದು ನಡೆದ ಈ ವಾರ್ಷಿಕ ಸಭೆಗೆ ಗೈರಾಗಿದ್ದಾರೆ .

ಇರಾನ್‌ ಹಾಗೂ ಅಮೆರಿಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಮಹಾಯುದ್ದದ ಕಾರ್ಮೋಡ ಎಂಬ ಆತಂಕದ ನಡುವೆ ಸುಪ್ರೀಂ ಲೀಡರ್‌ ಅಯತುಲ್ಲಾ ಖಮೇನಿಯ ಈ ನಡೆ ಕೂತುಹಲ ಮೂಡಿಸಿದೆ. ಫೆ.8 ಎಂಬುದು ಇರಾನ್‌ ನಾಯಕರ ಪಾಲಿಗೆ ಮಹತ್ವದ ದಿನವಾಗಿದ್ದು, 1979ರ ಇಸವಿಯ ಫೆ.8ರಂದು ಪಹ್ಲವಿ ವಂಶದ ಆಳ್ವಿಕೆಯನ್ನು ಕೊನೆಗಾಣಿಸಲು ವಾಯುಪಡೆಯ ಅಧಿಕಾರಿಗಳು ರುಹೊಲ್ಲಾ ಖೊಮೇನಿಗೆ ಬೆಂಬಲವನ್ನು ಸೂಚಿಸಿದ ದಿನವಾಗಿ ಆಚರಿಸುತ್ತಾರೆ.

ಆಗಿನಿಂದಲೂ ಈವರೆಗೂ ಈ ದಿನವನ್ನು ಆ ದಿನ ಸ್ಮರಾಣರ್ಥವಾಗಿ ಸುಪ್ರೀಂ ಲೀಡರ್‌ ಗಳು ಭೇಟಿಯಾಗುತ್ತಿದ್ದರು. ಆ ಸಂಪ್ರಾದಯವನ್ನು ಖಮೇನಿ ಈವರೆಗೂ ನಡೆಸಿಕೊಂಡು ಬಂದಿದ್ದು, ಇರಾನ್‌ ನ ವಾಯುಪಡೆಯ ಪ್ರಾಬಲ್ಯತೆಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸಭೆಯಲ್ಲಿ ಭೇಟಿಯಾಗುತ್ತಾರೆ. ಆದರೆ, ನಿನ್ನೆಯ ಈ ಸಭೆಯನ್ನು ಸುಪ್ರೀಂ ಲೀಡರ್‌ ಖಮೇನಿ ಬದಲಿಗೆ ಇರಾನ್‌ ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹಿಂ ಮೌಸಾವಿ ಹಾಜರಾಗಿದ್ದಾರೆ.

ಖಮೇನಿ “ಇರಾನ್ ಮೇಲಿನ ಯಾವುದೇ ಅಮೆರಿಕದ ದಾಳಿಯು ಮಧ್ಯಪ್ರಾಚ್ಯದಾದ್ಯಂತ ವ್ಯಾಪಕ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಇದು ಇಡೀ ಜಗತ್ತಿನಾದ್ಯಂತ ಯುದ್ದವನ್ನು ವ್ಯಾಪಿಸುವಂತೆ ಮಾಡುತ್ತದೆ” ಎಂದು ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಈ ಬೆನ್ನಲ್ಲೇ, ಈ ನಿರ್ಣಯ ಅಮೆರಿಕಾದಿಂದಾಗುವ ಸಂಭಾವ್ಯ ಯುದ್ದಕ್ಕೆ ಪ್ರಚೋದನೆ ನೀಡದಂತೆ ಕಾಪಾಡಿಕೊಳ್ಳಲು ನಡೆಸಿರುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !