September 30, 2026
Wednesday, September 30, 2026
spot_img

ದಿನಭವಿಷ್ಯ: ವೃತ್ತಿಯಲ್ಲಿ ಹಿನ್ನಡೆ ಕಂಡರೂ ಅದು ಬೇಗ ಸರಿಯಾಗಲಿದೆ, ವೈವಾಹಿಕ ಬಂಧ ಕೂಡಿಬಂದೀತು

ಮೇಷ
ನೀವು ಬಯಸಿದ ರೀತಿ ದಿನ ಸಾಗಿದರೂ ಅದರ ಬೆನ್ನಿಗೆ ಸಮಸ್ಯೆ ಕೂಡಾ ಉದ್ಭವಿಸುವುದು. ಎಚ್ಚರದಿಂದ ಪ್ರತಿಕ್ರಿಯಿಸಿ. ಕೌಟುಂಬಿಕ ಅಸಹಕಾರ.
ವೃಷಭ
ನಿಮ್ಮ ಸಮಸ್ಯೆ, ಗೊಂದಲ ನಿವಾರಣೆಗೆ ಸ್ಪಷ್ಟ ಆಲೋಚನೆ ಮುಖ್ಯ. ಯಾರದೋ ಮಾತು ಕೇಳಿ ಕೆಡಬೇಡಿ. ವೈವಾಹಿಕ ಬಂಧ ಕೂಡಿಬಂದೀತು.
ಮಿಥುನ
ಫಲಪ್ರದ ದಿನ. ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ವ್ಯಾಜ್ಯ ಪರಿಹಾರದ ಸಂಕೇತ. ದೈಹಿಕ ನೋವಿಗೆ ಮುಕ್ತಿ. ಮಾನಸಿಕ ನಿರಾಳತೆ.
ಕಟಕ
ನಿಮ್ಮ ಸುತ್ತಲಿನ ಬೆಳವಣಿಗೆಗೆ ನೀವು ಕಾರಣರಾಗದಿದ್ದರೂ ನಿಮ್ಮ ಮೇಲೆ ಪರಿಣಾಮ ಬೀರಲಿದೆ. ಸೂಕ್ತ ರೀತಿಯಲ್ಲಿ ನಿಭಾಯಿಸಿ.
ಸಿಂಹ
ಕುಟುಂಬದಲ್ಲಿ ಹೊಂದಾಣಿಕೆ ಕೊರತೆ. ವಿರಸ ಸಂಭವ. ವೃತ್ತಿಯಲ್ಲಿ ಹಿನ್ನಡೆ ಕಂಡರೂ ಅದು ಬೇಗ ಸರಿಯಾಗಲಿದೆ. ದಿನದಂತ್ಯಕ್ಕೆ ನಿಶ್ಚಿಂತೆ.
ಕನ್ಯಾ
ವೃತ್ತಿಯಲ್ಲಿ ಯಶ. ಖಾಸಗಿ ಬದುಕಲ್ಲೂ ಸಮಸ್ಯೆ ನಿವಾರಣೆ. ನಿಮ್ಮ ವಿಶ್ವಾಸ ಕುಂದಿಸಲು ಕೆಲವರ ಯತ್ನ. ಅವರನ್ನು ದೂರವಿಡಿ.
ತುಲಾ
ಪ್ರತಿಯೊಂದು ಕಾರ್ಯದಲ್ಲಿ ಗುಣಾತ್ಮಕ ಪ್ರತಿಫಲ ಕಾಣುವಿರಿ. ಖಾಸಗಿ ಮತ್ತು ವೃತ್ತಿ ವ್ಯವಹಾರದ ಮಧ್ಯೆ ಸಮತೋಲನ ಅಗತ್ಯ.
ವೃಶ್ಚಿಕ
ನಿಮ್ಮ ವಿಶ್ವಾಸ ಕುಂದಿಸುವ ಪರಿಸ್ಥಿತಿ ಸೃಷ್ಟಿ. ತಾಳ್ಮೆಯಿಂದ ವ್ಯವಹರಿಸಿ. ದುಡುಕು ಬೇಡಿ. ಆತ್ಮೀಯರ ಹಿತವಚನ ಪಾಲಿಸಿ. ಖರ್ಚು ಅಧಿಕ.
ಧನು
ವೃತ್ತಿಯಲ್ಲಿ ಅಧಿಕ ಒತ್ತಡ. ಖಾಸಗಿ ಸಮಸ್ಯೆ ಏಕಾಗ್ರತೆ ಕುಂದಿಸುವುದು. ಆಪ್ತರ ಒಡನಾಟದಿಂದ ದುಮ್ಮಾನ ಪರಿಹಾರ. ಹಣದ ಕೊರತೆ ನೀಗಲಿದೆ.
ಮಕರ
ನಿಮ್ಮ ಘನತೆಗೆ ಕುಂದು ತರುವ ಪ್ರಸಂಗ ಸಂಭವ. ಭವಿಷ್ಯದಲ್ಲಿ ಹಾನಿ ತರಬಲ್ಲ ಪ್ರವೃತ್ತಿ ತೋರದಿರಿ. ಪ್ರಲೋಭನೆಗೆ ಬಲಿಯಾಗದಿರಿ.
ಕುಂಭ
ಆತ್ಮೀಯರು ದೂರ ಸರಿದಾರು. ಭಾವುಕತೆ ನಿಮ್ಮ ಮನಸ್ಸು ಕುಂದಿಸಲಿದೆ. ವೃತ್ತಿಯಲ್ಲಿ ವಿರೋಧ ಹೆಚ್ಚಲಿದೆ. ಸಂಯಮವಿರಲಿ.
ಮೀನ
ಈ ದಿನ ಸುಗಮ ವಾಗಿ ಸಾಗಲಿದೆ. ವಿರೋಧ ಶಮನ. ಆರ್ಥಿಕ ಒತ್ತಡ ನಿವಾರಣೆ. ಮನೆಯ ಶಾಂತಿ ಕಾಪಾಡಲು ಆದ್ಯತೆ ಕೊಡಿ. ದುಡುಕು ಬೇಡ.

Must Read