October 18, 2026
Sunday, October 18, 2026
spot_img

ಅಸ್ಸಾಂ ಮೇಲೆ ಕಣ್ಣು.. ಸಿಎಂ ಪಟ್ಟದ ಮೇಲೆ ಮನಸ್ಸು! ಡಿಕೆಶಿ ದೆಹಲಿ ಯಾತ್ರೆಯ ಮರ್ಮವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಕಾವೇರಿದ್ದು, ಸದ್ಯ ಈ ‘ಕುರ್ಚಿ ಕಿತ್ತಾಟ’ ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ಟಿಲೇರಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರ ಮನವೊಲಿಸಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಅಧಿಕೃತವಾಗಿ ಅಸ್ಸಾಂ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಮತ್ತು ಪಕ್ಷದ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಆದರೆ, ಈ ಪ್ರವಾಸದ ಅಸಲಿ ಉದ್ದೇಶ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಿಎಂ ಪಟ್ಟಕ್ಕಾಗಿ ಒತ್ತಡ ಹೇರುವುದೇ ಆಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಅವರು ತೆರೆಮರೆಯಲ್ಲಿ ಸಕಲ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ತಮ್ಮ ದೆಹಲಿ ಪ್ರವಾಸದ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ನಾನು ರಾಹುಲ್ ಗಾಂಧಿ ಅವರ ಭೇಟಿಗೆ ಇನ್ನೂ ಸಮಯ ಕೇಳಿಲ್ಲ. ಪ್ರಸ್ತುತ ಅಸ್ಸಾಂ ರಾಜ್ಯದ ಚುನಾವಣಾ ವಿಚಾರಗಳ ಜಂಜಾಟದಲ್ಲಿದ್ದೇನೆ. ಯಾರನ್ನೂ ಭೇಟಿ ಮಾಡಿಲ್ಲ, ಸುಮ್ಮನೆ ಇಲ್ಲದ ಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ,” ಎಂದು ಸ್ಪಷ್ಟನೆ ನೀಡುವ ಮೂಲಕ ಕುತೂಹಲ ಕಾಯ್ದುಕೊಂಡಿದ್ದಾರೆ.

Must Read