ಕೆಲವೊಮ್ಮೆ ಏನೂ ಕಾರಣ ಇಲ್ಲದೆ ಎದೆ ಜೋರಾಗಿ ಬಡಿದುಕೊಳ್ಳುತ್ತೆ ಅಲ್ವಾ? ಕೆಲವರು ಅದನ್ನ ಭಾವನಾತ್ಮಕ ಕ್ಷಣಗಳ ಜೊತೆ ಸಂಪರ್ಕಿಸಿಕೊಳ್ಳುತ್ತಾರೆ. ಆದರೆ ದೇಹ ನೀಡುವ ಪ್ರತಿಯೊಂದು ಸಂಕೇತವೂ ಅಷ್ಟೇನೂ ರೋಮ್ಯಾಂಟಿಕ್ ಅರ್ಥ ಕೊಡೋದಿಲ್ಲ.. ಆದರೆ ನಿಜ ಹೇಳಬೇಕು ಅಂದ್ರೆ, ದೇಹ ಕೊಡೋ ಈ ಸೂಚನೆಗಳನ್ನು ಲೈಟ್ ಆಗಿ ತೆಗೆದುಕೊಳ್ಳೋದು ಕೂಡ ಸರಿಯಲ್ಲ. ಹೃದಯ ಜೋರಾಗಿ ಹೊಡೆದುಕೊಳ್ಳೋದು ಕೆಲವೊಮ್ಮೆ ಆರೋಗ್ಯದ ಸಮಸ್ಯೆಯ ಸಂಕೇತವೂ ಆಗಿರಬಹುದು. ಅದಕ್ಕೆ ಕಾರಣ ಏನು ಅಂತ ಸ್ವಲ್ಪ ಗಮನ ಕೊಡೋದು ತುಂಬಾ ಮುಖ್ಯ.
- ಅತಿಯಾದ ಒತ್ತಡ, ಆತಂಕ ಅಥವಾ ನರ್ವಸ್ ಆಗಿರುವಾಗ ಹೃದಯ ಬಡಿತ ವೇಗವಾಗಬಹುದು. ಇದು ಸಾಮಾನ್ಯ ಪ್ರತಿಕ್ರಿಯೆಯಾದರೂ ನಿರಂತರವಾಗಿದ್ದರೆ ದೇಹ ವಿಶ್ರಾಂತಿ ಕೇಳುತ್ತಿರುವ ಸೂಚನೆ.
- ಹೈ ಬಿಪಿ ಅಥವಾ ಲೋ ಬಿಪಿ ಇರುವವರಲ್ಲಿ ಎದೆ ಬಡಿತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ದೀರ್ಘಕಾಲ ಮುಂದುವರಿದರೆ ಹೃದಯಕ್ಕೆ ಒತ್ತಡ ಹೆಚ್ಚಾಗಬಹುದು.
- ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಅಥವಾ ದೇಹದಲ್ಲಿ ಶಕ್ತಿ ಕೊರತೆಯಿದ್ದರೆ ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಬಡಿತ ಹೆಚ್ಚಾಗುತ್ತದೆ.
- ಹೆಚ್ಚು ಕಾಫಿ, ನಿದ್ರೆ ಕೊರತೆ, ಅಸ್ವಸ್ಥ ಜೀವನಶೈಲಿ ಕೂಡ ಎದೆ ಬಡಿತ ಹೆಚ್ಚಿಸುವ ಕಾರಣವಾಗಬಹುದು. ಸರಿಯಾದ ರೂಟೀನ್ ಅಗತ್ಯ.



