July 9, 2026
Thursday, July 9, 2026
spot_img

ರನ್ ಮಷೀನ್ ದಾಖಲೆ ಧೂಳೀಪಟ: ವಿಶ್ವಕಪ್ ಸಿಕ್ಸರ್ ಪಟ್ಟಿಯಲ್ಲಿ ಗುರ್ಬಾಝ್ ‘ಟಾಪ್-5’ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನ ಅಂಗಳದಲ್ಲಿ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಝ್ ಸಿಕ್ಸರ್‌ಗಳ ಸುರಿಮಳೆಗೈಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ರೋಚಕ ಪಂದ್ಯದಲ್ಲಿ ಅಬ್ಬರಿಸಿದ ಗುರ್ಬಾಝ್, ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಸುದೀರ್ಘ ಕಾಲದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧ ಕೇವಲ 42 ಎಸೆತಗಳನ್ನು ಎದುರಿಸಿದ ಗುರ್ಬಾಝ್, 84 ರನ್ ಚಚ್ಚಿದರು. ಇವರ ಈ ಸ್ಫೋಟಕ ಇನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳಿದ್ದವು. ಇಷ್ಟಕ್ಕೇ ನಿಲ್ಲದ ಇವರ ಅಬ್ಬರ, ಸೂಪರ್ ಓವರ್‌ನಲ್ಲೂ ಮುಂದುವರಿದು 3 ಸಿಕ್ಸರ್ ಸಿಡಿಸುವ ಮೂಲಕ ಒಟ್ಟು 10 ಸಿಕ್ಸರ್‌ಗಳನ್ನು ದಾಖಲಿಸಿದರು.

ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುರ್ಬಾಝ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ವಿರಾಟ್ ಕೊಹ್ಲಿ 33 ಇನಿಂಗ್ಸ್‌ಗಳಲ್ಲಿ 35 ಸಿಕ್ಸರ್ ಬಾರಿಸಿದ್ದರೆ, ಗುರ್ಬಾಝ್ ಕೇವಲ 18 ಇನಿಂಗ್ಸ್‌ಗಳಲ್ಲೇ 36 ಸಿಕ್ಸರ್ ಸಿಡಿಸುವ ಮೂಲಕ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ‘ಯೂನಿವರ್ಸಲ್ ಬಾಸ್’ ಕ್ರಿಸ್ ಗೇಲ್ 63 ಸಿಕ್ಸರ್‌ಗಳೊಂದಿಗೆ ಇಂದಿಗೂ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಗುರ್ಬಾಝ್ ಅವರ ಪ್ರಸ್ತುತ ಫಾರ್ಮ್ ನೋಡಿದರೆ ಮುಂದಿನ ದಿನಗಳಲ್ಲಿ ಈ ದಾಖಲೆಗೂ ಕುತ್ತು ತರುವ ಲಕ್ಷಣಗಳು ಕಾಣುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !