February 12, 2026
Thursday, February 12, 2026
spot_img

PSL ಹರಾಜಿನಲ್ಲಿ ವಿದೇಶಿ ಸ್ಟಾರ್ ಆಟಗಾರರ ದಂಡು! ಯಾವ ತಂಡದಲ್ಲಿ ಯಾರಿದ್ದಾರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ್ ಸೂಪರ್ ಲೀಗ್‌ನ 11ನೇ ಸೀಸನ್‌ಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಜಗತ್ತಿನ ಖ್ಯಾತ ಕ್ರಿಕೆಟಿಗರು ವಿವಿಧ ತಂಡಗಳ ಪಾಲಾಗಿದ್ದಾರೆ. ವಿಶೇಷವೆಂದರೆ, ಆಸ್ಟ್ರೇಲಿಯಾದ ದಿಗ್ಗಜರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಂತಹ ಆಟಗಾರರು ಈ ಬಾರಿ ಪಿಎಸ್​ಎಲ್ ರಂಗೇರಿಸಲಿದ್ದಾರೆ.

ಯಾವ ತಂಡಕ್ಕೆ ಯಾರು ಸೇರ್ಪಡೆಯಾಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇಸ್ಲಾಮಾಬಾದ್ ಯುನೈಟೆಡ್
ಕಿವಿ ತಾರೆ ಡೆವೊನ್ ಕಾನ್ವೇ ಈ ತಂಡದ ಪ್ರಮುಖ ಆಕರ್ಷಣೆ.

ಆಟಗಾರರು: ಡೆವೊನ್ ಕಾನ್ವೇ, ಆಂಡ್ರೀಸ್ ಗೌಸ್, ಮಾರ್ಕ್ ಚಾಪ್ಮನ್, ಮ್ಯಾಕ್ಸ್ ಬ್ರ್ಯಾಂಟ್, ಶಮರ್ ಜೋಸೆಫ್, ರಿಚರ್ಡ್ ಗ್ಲೀಸನ್, ದೀಪೇಂದ್ರ ಸಿಂಗ್ ಐರೀ.

ಕರಾಚಿ ಕಿಂಗ್ಸ್
ಅನುಭವಿ ಡೇವಿಡ್ ವಾರ್ನರ್ ಮತ್ತು ಸ್ಪಿನ್ ಮಾಂತ್ರಿಕ ಆ್ಯಡಂ ಝಂಪಾ ಕರಾಚಿ ತಂಡಕ್ಕೆ ಬಲ ತುಂಬಲಿದ್ದಾರೆ.

ಆಟಗಾರರು: ಮೊಯಿನ್ ಅಲಿ, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಜಾನ್ಸನ್ ಚಾರ್ಲ್ಸ್, ಅಕಿಬ್ ಇಲ್ಯಾಸ್, ಮುಹಮ್ಮದ್ ವಸೀಮ್.

ಸಿಯಾಲ್ಕೋಟ್ ಸ್ಟಾಲಿಯನ್ಸ್
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಎಂಟ್ರಿ ಈ ಬಾರಿ ಲೀಗ್‌ನ ಹೈಲೈಟ್ ಆಗಲಿದೆ.

ಆಟಗಾರರು: ಸ್ಟೀವ್ ಸ್ಮಿತ್, ಆಶ್ಟನ್ ಟರ್ನರ್, ಪೀಟರ್ ಸಿಡ್ಲ್, ತಬ್ರೈಝ್ ಶಮ್ಸಿ, ಜೋಶ್ ಫಿಲಿಪೆ, ಡೆಲಾನೊ ಪೊಟ್ಗಿಟರ್, ಲಾಚ್ಲಾನ್ ಶಾ.

ಲಾಹೋರ್ ಖಲಂದರ್ಸ್
ಬಾಂಗ್ಲಾದ ಮುಸ್ತಾಫಿಝುರ್ ಮತ್ತು ಜಿಂಬಾಬ್ವೆಯ ಸಿಕಂದರ್ ರಾಝ ತಂಡದ ಬೆನ್ನೆಲುಬಾಗಿದ್ದಾರೆ.

ಆಟಗಾರರು: ಮುಸ್ತಾಫಿಝುರ್ ರೆಹಮಾನ್, ಸಿಕಂದರ್ ರಾಝ, ದಸುನ್ ಶಾನಕ, ಗುಡಾಕೇಶ್ ಮೋಟಿ, ಪರ್ವೇಝ್ ಹೊಸೈನ್ ಎಮನ್.

ಪೇಶಾವರ್ ಝಲ್ಮಿ
ಆಟಗಾರರು: ಮೈಕೆಲ್ ಬ್ರೇಸ್‌ವೆಲ್, ಕುಸಾಲ್ ಮೆಂಡಿಸ್, ಜೇಮ್ಸ್ ವಿನ್ಸ್, ಆರೋನ್ ಹಾರ್ಡಿ, ನಹಿದ್ ರಾಣಾ.

ಕ್ವೆಟ್ಟಾ ಗ್ಲಾಡಿಯೇಟರ್ಸ್
ಆಟಗಾರರು: ರೈಲಿ ರೋಸೌವ್, ಟಾಮ್ ಕರನ್, ಬೆನ್ ಮೆಕ್‌ಡರ್ಮಾಟ್, ಸ್ಯಾಮ್ಯುಯೆಲ್ ಹಾರ್ಪರ್, ಬ್ರೆಟ್ ಹ್ಯಾಂಪ್ಟನ್, ಬೆವೊನ್ ಜೇಕಬ್ಸ್, ಸ್ಪೆನ್ಸರ್ ಜಾನ್ಸನ್.

ಹೈದರಾಬಾದ್ ಕಿಂಗ್ಸ್‌ಮೆನ್
ಮಾರ್ನಸ್ ಲಾಬುಶೇನ್ ಅವರ ಉಪಸ್ಥಿತಿ ತಂಡಕ್ಕೆ ಹೊಸ ಚೈತನ್ಯ ನೀಡಲಿದೆ.

ಆಟಗಾರರು: ಮಾರ್ನಸ್ ಲಾಬುಶೇನ್, ಕುಸಾಲ್ ಪೆರೆರಾ, ರಿಲೆ ಮೆರೆಡಿತ್, ಒಟ್ನೀಲ್ ಬಾರ್ಟ್‌ಮನ್, ಶಯಾನ್ ಜಹಾಂಗೀರ್.

ಟೀಮ್ ರಾವಲ್ಪಿಂಡಿ
ಆಟಗಾರರು: ಸ್ಯಾಮ್ ಬಿಲ್ಲಿಂಗ್ಸ್, ಡೇರಿಲ್ ಮಿಚೆಲ್, ರಿಶಾದ್ ಹೊಸೈನ್, ಲಾರಿ ಇವಾನ್ಸ್, ಡಯಾನ್ ಫಾರೆಸ್ಟರ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !