ಮೇಷ
ಅನ್ಯರ ಭಾವನೆಗೆ ಅಧಿಕ ಬೆಲೆ ನೀಡಿ ನಿಮ್ಮ ಮನಸ್ಸು ನೋಯಿಸಿಕೊಳ್ಳು ವಿರಿ. ಹಳೆಯ ಪ್ರಮಾದ ಸರಿಪಡಿಸುವ ಅವಕಾಶ ಸಿಗಲಿದೆ. ಧನಹಾನಿ.
ವೃಷಭ
ಹೊಸ ಯೋಜನೆ ಕೈಗೆತ್ತಿಕೊಳ್ಳುವ ಉತ್ಸಾಹ. ಆರಂಭಿಕ ಅಡ್ಡಿ ಬಂದರೂ ಬಳಿಕ ಸುಗಮ. ಧನಲಾಭ ಮಾಡಿಕೊಳ್ಳುವ ಉತ್ತಮ ಅವಕಾಶ ದೊರಕಲಿದೆ.
ಮಿಥುನ
ಎಲ್ಲರ ಸಂಗ ತ್ಯಜಿಸಿ ಏಕಾಂಗಿಯಾಗಿರುವ ಮನಸ್ಥಿತಿ ಕಾಡಲಿದೆ. ಹಳೆಯ ನೆನಪಿನಲ್ಲಿ ವರ್ತಮಾನ ಮರೆಯದಿರಿ. ಧನಲಾಭ.
ಕಟಕ
ಹೊಣೆಗಾರಿಕೆ ನಿಭಾವಣೆ ಕಷ್ಟವಾದೀತು. ಸಹಾಯ ದೊರಕದು. ಎಲ್ಲರ ಮೇಲೆ ರೇಗುವ ಸಂದರ್ಭ ಒದಗೀತು. ಸಹನೆಯಿರಲಿ.
ಸಿಂಹ
ಹಳೆಯ ಸ್ನೇಹಿತರ ಭೇಟಿಯಾದೀತು. ಇದು ಬದುಕಿನ ಕುರಿತಂತೆ ಪರಾಮರ್ಶೆಗೆ ಅನುವು ಕಲ್ಪಿಸಬಹುದು. ಕೌಟುಂಬಿಕ ಒತ್ತಡ.
ಕನ್ಯಾ
ಎಂದಿಗಿಂತ ಭಿನ್ನವಾಗಿ ದಿನ ಸಾಗಲಿದೆ. ಇದು ನಿಮಗೆ ಹೆಚ್ಚು ಪ್ರಿಯವಾಗಲಿದೆ. ಬದಲಾವಣೆಯನ್ನು ಸ್ವಾಗತಿಸುವುದೇ ಒಳಿತು.
ತುಲಾ
ಹೆಚ್ಚು ಪ್ರಾಕ್ಟಿಕಲ್ ಆಗಿ ಮತ್ತು ವೃತ್ತಿಪರರಾಗಿ ಕಾರ್ಯ ನಿರ್ವಹಿಸಿ. ಅತಾರ್ಕಿಕ ನಿಲುವು ತಳೆಯಬೇಡಿ. ಆರ್ಥಿಕ ಸ್ಥಿರತೆ ನೆಮ್ಮದಿ ತರುವುದು.
ವೃಶ್ಚಿಕ
ವೃತ್ತಿ ಮತ್ತು ಮನೆಯಲ್ಲಿ ಹೆಚ್ಚು ಜವಾಬ್ದಾರಿ. ದೈಹಿಕ ನೋವಿದ್ದವರಿಗೆ ನಿರಾಳತೆ. ಸಾಂಸಾರಿಕ ಕಿರಿಕಿರಿ ನೆಮ್ಮದಿ ಕಲಕಬಹುದು.
ಧನು
ಅದೃಷ್ಟದ ದಿನ. ಬಡ್ತಿ ಸಂಭವ. ಆರ್ಥಿಕ ಉನ್ನತಿ ಸಾಽಸುವಿರಿ. ಸಣ್ಣ ವಿಷಯಕ್ಕೆ ರೇಗದಿರಿ. ಶಾಂತವಾಗಿ ಯೋಚಿಸಿ ಪ್ರತಿಕ್ರಿಯಿಸಿರಿ.
ಮಕರ
ಪ್ರೀತಿಪಾತ್ರರಿಗಾಗಿ. ಸ್ವಲ್ಪ ಕಾಲ ವ್ಯಯಿಸಿ. ವೃತ್ತಿ ಕಾರ್ಯದಲ್ಲೇ ಮುಳುಗದಿರಿ. ಉದ್ಯೋಗದಲ್ಲಿ ಬಡ್ಡಿ ಸಿಗಬಹುದು.
ಕುಂಭ
ಕಷ್ಟವೆಂದು ಭಾವಿಸಿದ್ದ ಕಾರ್ಯ ಸುಲಭವಾಗಲಿದೆ. ಇತರರ ಸಹಾಯ ಪಡೆಯಲು ನಿರಾಕರಿಸಬೇಡಿ. ಅದು ಒಳಿತನ್ನೇ ತರಲಿದೆ.
ಮೀನ
ಕೆಲವು ಕೆಲಸ ಕೈಗೊಳ್ಳಲು ಅತಿಯಾಗಿ ಚಿಂತಸಬೇಡಿ. ಕ್ಷಿಪ್ರ ಕಾರ್ಯಾಚರಣೆ ಒಳಿತು. ವಿಳಂಬಗತಿಯೇ ನಿಮ್ಮ ಹಿನ್ನಡೆಗೆ ಕಾರಣ.



