ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಈ ಬಾರಿ ಫೆಬ್ರವರಿ 15ರಂದು ಆಚರಿಸಲಾಗುತ್ತಿದೆ. ಭಕ್ತರು ಉಪವಾಸ ಮತ್ತು ಜಾಗರಣೆಯ ಮೂಲಕ ಈಶ್ವರನನ್ನು ಆರಾಧಿಸಲು ಸಜ್ಜಾಗುತ್ತಿದ್ದಾರೆ. ಪಂಚಾಂಗದ ಪ್ರಕಾರ, ಫೆಬ್ರವರಿ 15ರ ಬೆಳಗ್ಗೆಯಿಂದಲೇ ಚತುರ್ದಶಿ ತಿಥಿ ಆರಂಭವಾಗುವುದರಿಂದ ಅಂದೇ ಹಬ್ಬದ ಸಡಗರ ಮನೆಮಾಡಲಿದೆ.
ವಿಶೇಷವಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಲು ಮತ್ತು ಪೂಜೆ ಸಲ್ಲಿಸಲು ಫೆಬ್ರವರಿ 16ರ ಮುಂಜಾನೆ (ಮಧ್ಯರಾತ್ರಿ) 12:09 ರಿಂದ 01:01ರ ವರೆಗಿನ ನಿಶಿತ ಕಾಲ ಅತ್ಯಂತ ಶ್ರೇಷ್ಠವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ. ದೇಶಾದ್ಯಂತ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಈಗಾಗಲೇ ಶುರುವಾಗಿದೆ.
ಶುಭ ಮುಹೂರ್ತದ ವಿವರಗಳು:
ಚತುರ್ದಶಿ ತಿಥಿ ಪ್ರಾರಂಭ: ಫೆಬ್ರವರಿ 15, 2026ರಂದು ಬೆಳಿಗ್ಗೆ 09:12ಕ್ಕೆ.
ಚತುರ್ದಶಿ ತಿಥಿ ಮುಕ್ತಾಯ: ಫೆಬ್ರವರಿ 16, 2026ರಂದು ಬೆಳಿಗ್ಗೆ 07:45ಕ್ಕೆ.
ನಿಶಿತ ಕಾಲ ಪೂಜೆ (ಅತ್ಯಂತ ಪ್ರಶಸ್ತ ಸಮಯ): ಫೆಬ್ರವರಿ 16ರ ಮಧ್ಯರಾತ್ರಿ 12:09 ರಿಂದ 01:01 ರವರೆಗೆ.
ಈ ದಿನ ಭಕ್ತರು ಉಪವಾಸ, ಜಾಗರಣೆ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಶಿವನನ್ನು ಆರಾಧಿಸುತ್ತಾರೆ. ಫೆಬ್ರವರಿ 16ರ ರಾತ್ರಿ ‘ನಿಶಿತ ಕಾಲ’ ಪೂಜೆಗೆ ಅತ್ಯಂತ ಸೂಕ್ತ ಸಮಯವಾಗಿದ್ದು, ಈ ಸಮಯದಲ್ಲಿ ಮಾಡುವ ಪ್ರಾರ್ಥನೆ ವಿಶೇಷ ಫಲ ನೀಡುತ್ತದೆ ಎಂದು ಪುರಾಣಗಳು ಹೇಳುತ್ತವೆ. ಫೆಬ್ರವರಿ 15ರ ಬೆಳಿಗ್ಗೆಯಿಂದಲೇ ಚತುರ್ದಶಿ ತಿಥಿ ಆರಂಭವಾಗುವುದರಿಂದ, ಅಂದು ದಿನವಿಡೀ ಭಕ್ತರು ಹಬ್ಬದ ಆಚರಣೆಯಲ್ಲಿ ತೊಡಗಬಹುದು.



