June 1, 2026
Monday, June 1, 2026
spot_img

ಮಂಡ್ಯ | ಶಿವಪುರದಲ್ಲಿ ರಸ್ತೆ ದಾಟುವಾಗ ಕಾರು ಡಿಕ್ಕಿ: ಮಹಿಳೆ ಸಾವು

ಹೊಸದಿಗಂತ ವರದಿ, ಮಂಡ್ಯ :

ಕಾರು ಡಿಕ್ಕಿ ಹೊಡೆದು ಹೊಟೇಲ್ ಕಾರ್ಮಿಕೆ ಮೃತಪಟ್ಟಿರುವ ಘಟನೆ ಪಟ್ಟಣದ ಶಿವಪುರ ಸಮೀಪದ ಕೊಲ್ಲಿ ಸರ್ಕಲ್ ಬಳಿ ಗುರುವಾರ ಬೆಳಿಗ್ಗೆ ಜರುಗಿದೆ.

ತಾಲೂಕಿನ ತಿಪ್ಪೂರು ಗ್ರಾಮದ ಲೇ, ಸಿದ್ದಯ್ಯ ಪತ್ನಿ ಜಯಮ್ಮ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ.

ಕೊಲ್ಲಿ ಸರ್ಕಲ್ ಸಮೀಪದ ಕೆಂಪಣ್ಣ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮ ತಮ್ಮ ಗ್ರಾಮದಿಂದ ಬಸ್ಸಿನಲ್ಲಿ ಬಂದು ಕೊಪ್ಪ ಸರ್ಕಲ್ನಲ್ಲಿ ರಸ್ತೆ ದಾಟುತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಈ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !