February 13, 2026
Friday, February 13, 2026
spot_img

Viral | ಯಮನ ಪಾದದಡಿಯಿಂದ ಜೀವ ಎಳೆತಂದ ಟಿಸಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧಾವಂತದ ಬದುಕಿನ ಈ ನಗರದಲ್ಲಿ ಸಣ್ಣ ಅಜಾಗರೂಕತೆಯೂ ಎಂತಹ ಅಪಾಯ ತಂದೊಡ್ಡಬಲ್ಲದು ಎಂಬುದಕ್ಕೆ ಮುಂಬೈನ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಅಥವಾ ಇಳಿಯುವ ಅವಸರದಲ್ಲಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಬಿದ್ದ ಮಹಿಳೆಯೊಬ್ಬರನ್ನು ರೈಲ್ವೆ ಟಿಕೆಟ್ ಪರೀಕ್ಷಕ ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಕುರ್ಲಾ ನಿಲ್ದಾಣದಲ್ಲಿ ಜನದಟ್ಟಣೆ ಅಧಿಕವಾಗಿದ್ದ ಸಮಯದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದರು. ಅವರು ರೈಲಿನ ಚಕ್ರಗಳ ಅಡಿ ಸಿಲುಕುವಷ್ಟರಲ್ಲೇ ಹತ್ತಿರದಲ್ಲೇ ಇದ್ದ ಟಿಸಿ ಅವರು ಮಿಂಚಿನ ವೇಗದಲ್ಲಿ ಧಾವಿಸಿ, ಮಹಿಳೆಯನ್ನು ಪ್ಲಾಟ್‌ಫಾರ್ಮ್ ಕಡೆಗೆ ಎಳೆದುಕೊಂಡಿದ್ದಾರೆ.

ಈ ಇಡೀ ರೋಚಕ ದೃಶ್ಯವು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟಿಸಿ ಅವರ ಈ ಅದ್ಭುತ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ರೈಲ್ವೆ ಇಲಾಖೆಯು ಪ್ರಯಾಣಿಕರಲ್ಲಿ “ಚಲಿಸುವ ರೈಲಿನಿಂದ ಇಳಿಯುವುದು ಅಥವಾ ಹತ್ತುವುದು ಜೀವಕ್ಕೆ ಅಪಾಯಕಾರಿ” ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !