February 13, 2026
Friday, February 13, 2026
spot_img

ಬರೋಬ್ಬರಿ 27,000 ಅಡಿ ಎತ್ತರದಲ್ಲಿ ಹಾರಾಟದ ವೇಳೆ ವಿಮಾನದ ಎಂಜಿನ್ ಸ್ಫೋಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ನೈಜೀರಿಯಾದಲ್ಲಿ 80 ಪ್ರಯಾಣಿಕರನ್ನು ಹೊತ್ತ ಪ್ಯಾಸೆಂಜರ್ ಫ್ಲೈಟ್ ಎಂಜಿನ್ ಸ್ಫೋಟಗೊಂಡಿದೆ. ಭೀಕರ ಶಬ್ದ ಕೇಳಿಸಿದ ಬೆನ್ನಲ್ಲೇ ವಿಮಾನದ ನಿಯಂತ್ರಣ ತಪ್ಪಿದೆ.

ಬರೋಬ್ಬರಿ 27,000 ಅಡಿ ಎತ್ತರದಲ್ಲಿ ವಿಮಾನ ಪ್ರಯಾಣದ ನಡುವೆ ಈ ಘಟನೆ ಸಂಭವಿಸಿದೆ. ಆದರೆ ಪೈಲೆಟ್ ಹರಸಹಾಸ ಮಾಡಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಬೋಯಿಂಗ್ 737-700 ವಿಮಾನ 80 ಪ್ರಯಾಣಿಕರನ್ನು ಹೊತ್ತು ಲಾಗೋಸ್‌ನಿಂದ ನೈಜೀರಿಯಾದ ಪೋರ್ಟ್ ಹಾರ್‌ಕೋರ್ಟ್‌ಗೆ ಪ್ರಯಾಣ ಬೆಳೆಸಿತ್ತು. 7.24ರ ಹೊತ್ತಿಗೆ ಮುಹಮ್ಮದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನ ಬರೋಬ್ಬರಿ 27,000 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿತ್ತು. ವಿಮಾನ ವೇಗವಾಗಿ ಸಾಗುತ್ತಿದ್ದಂತೆ ವಿಮಾನದ ಎಡಭಾಗದ ಎಂಜಿನ್‌ನಲ್ಲಿ ದೊಡ್ಡ ಶಬ್ದ ಕೇಳಿಸಿದೆ. ಒಂದು ಬಾರಿ ವಿಮಾನ ನಿಯಂತ್ರಣ ತಪ್ಪಿದೆ. ಇತ್ತ ಪ್ರಯಾಣಿಕರು ಶಬ್ದ ಕೇಳಿದೊಡನೆ ಆತಂಕಗೊಂಡಿದ್ದಾರೆ. ಹಲವು ಪ್ರಯಾಣಿಕರು ಚೀರಾಡಿದ್ದಾರೆ. ಕೆಲವರು ಎಂಜಿನ್ ಸ್ಫೋಟಗೊಂಡ ಬಳಿಕ ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿದಿದ್ದಾರೆ. ಇತ್ತ ಪೈಲೆಟ್ ತಾಳ್ಮೆಯಿಂದ ವಿಮಾನ ನಿಯಂತ್ರಿಸಿ ಏರ್ ಕಂಟ್ರೋಲ್‌ಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಏರ್ ಟ್ರಾಪಿಕ್ ಕಂಟ್ರೋಲ್ ಸಿಬ್ಬಂದಿಗಳು ತುರ್ತು ಭೂಸ್ವರ್ಶಕ್ಕೆ ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಸಿಬ್ಬಂದಿಗಳು,ಪೈಲೆಟ್ ಸೇರಿ ಒಟ್ಟು 80 ಮಂದಿ ಇದ್ದರು. ಹಾರಾಟದ ನಡುವೆ ಎಂಜಿನ್ ಸ್ಫೋಟಗೊಂಡರೂ ವಿಮಾನವನ್ನು ಯಶಸ್ವಿಯಾಗಿ ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲರು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ನೈಜಿರೀಯ ಸುರಕ್ಷತಾ ಮಂಡಳಿ ಈ ಘಟನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಯಾವ ಕಾರಣದಿಂದ ಎಂಜಿನ್ ಸ್ಫೋಟಗೊಂಡಿದೆ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !