February 13, 2026
Friday, February 13, 2026
spot_img

DREAMS | ಎಲ್ಲಾ ಕನಸುಗಳು ಯಾಕೆ ನೆನಪಿರೋದಿಲ್ಲ? ಕೆಲವೊಂದು ಮಾತ್ರ ಯಾಕೆ ನೆನಪಿರತ್ತೆ?

ಒಂದೊಂದು ಕನಸು ನಿಜವೇನೋ ಅನ್ನೋ ಹಾಗೆ ನೆನಪಿರುತ್ತದೆ. ಆದರೆ ಕೆಲವೊಂದು ಕನಸು ಏನು ಮಾಡಿದ್ರೂ ನೆನಪಾಗೋದಿಲ್ಲ. ನೆನಪೋ ಅಥವಾ ನಿಜವೋ ಒಂದೂ ಗೊತ್ತಾಗಂತಹ ಕನಸಿನ ಪ್ರತಿ ಕ್ಷಣವೂ ನೆನಪಿರುತ್ತದೆ. ಯಾಕೆ? ಕನಸುಗಳ ವಿಶೇಷತೆ ಏನು?

ಕನಸುಗಳು ನೆನಪಿರೋದು ಬಿಡೋದು ರ್ಯಾಪಿಡ್‌ ಐ ಮೂವ್‌ಮೆಂಟ್‌ ಮೇಲೆ ನಿರ್ಧರಿತವಾಗಿರುತ್ತದೆ. ನಿಮ್ಮ ಎಮೋಷನಲ್‌ ಇಂಟೆನ್ಸಿಟಿಗೆ ತಕ್ಕಂತಹ ಕನಸುಗಳು ಬರುತ್ತವೆ.

ತುಂಬ ಭಾವನೆಗಳು ತುಂಬಿರುವ ಕನಸುಗಳು ಮೆದುಳಿನ ಒಂದು ಅಂಶವನ್ನು ಎಚ್ಚರಗೊಳಿಸುತ್ತವೆ. ಹೀಗಾಗಿ ಆ ಕನಸು ನಿಮಗೆ ಸದಾ ನೆನಪಿರುತ್ತದೆ. ಯಾವುದಾದರೂ ಅತೀ ಸಂತಸದ ದಿನ, ಯಾವುದಾದರೂ ಅತಿಯಾದ ನೋವಿನ ದಿನ, ಕೆಟ್ಟ ಸಂದರ್ಭದಂತಹ ಕನಸುಗಳು ನೆನಪಿನಲ್ಲಿ ಉಳಿಯುತ್ತವೆ.

ಯಾವ ಸಮಯದಲ್ಲಿ ಕನಸು ಬೀಳುತ್ತದೆ ಎನ್ನುವುದು ಮುಖ್ಯ. ಬೆಳಗಿನ ಜಾವ ಬಿದ್ದ ಕನಸು ನೆನಪಿನಲ್ಲಿ ಇರುತ್ತದೆ. ಯಾಕಂದ್ರೆ ಇನ್ನೇನು ನೀವು ಎಚ್ಚರಗೊಳ್ಳಲಿರುತ್ತೀರಿ.

ಭಯ, ದೆವ್ವ, ಸಾವು, ಪ್ರಕೃತಿ ವಿಕೋಪ, ಮದುವೆ, ದೊಡ್ಡ ಕೆಲಸ, ಪ್ರೀತಿ ಇಂಥ ವಿಷಯಗಳ ಕನಸು ನೆನಪಿರುತ್ತದೆ. ನಿಮ್ಮ ಮೆದುಳಿನ ಆಕ್ಟಿವಿಡಿಯನ್ನು ಟ್ರಿಗರ್‌ ಮಾಡುತ್ತವೆ.

ಹಗಲುಗನಸು ಕಾಣುವವರು, ತುಂಬಾ ಕ್ರಿಯೇಟೀವ್‌ ಮೆದುಳಿನವರು ತಮ್ಮ ಕನಸುಗಳನ್ನು ನೆನಪಿಟ್ಟುಕೊಳ್ಳುತ್ತಾರೆ.

ರಪ್‌ ಎಂದು ಎದ್ದುಬಿಡಬೇಡಿ, ನಿಧಾನಕ್ಕೆ ಎದ್ದಾಗ ಕನಸುಗಳು ನೆನಪಿರುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !