February 14, 2026
Saturday, February 14, 2026
spot_img

Tech | ಫೋನ್ ಬಳಸೋವಾಗ ಈ ತಪ್ಪು ಮಾಡ್ಬೇಡಿ! ಬ್ಲಾಸ್ಟ್ ಆಗ್ಬಹುದು ಹುಷಾರ್

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ ಅದನ್ನು ತಪ್ಪಾಗಿ ಬಳಸಿದರೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಬ್ಯಾಟರಿ ಸ್ಫೋಟವಾಗುವುದು, ಹೀಟ್ ಆಗುವುದು ಆಗುತ್ತಿರುತ್ತೆ. ಸಾಮಾನ್ಯವಾಗಿ ನಾವು ಗಮನಿಸದ ಸಣ್ಣ ತಪ್ಪುಗಳೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಫೋನ್ ಬಳಸುವಾಗ ಕೆಲವು ಮುಖ್ಯ ಜಾಗ್ರತೆಗಳನ್ನು ಪಾಲಿಸುವುದು ಅತ್ಯಗತ್ಯ.

ಚಾರ್ಜ್ ಮಾಡುವಾಗ ಅತಿಯಾದ ಬಳಕೆ ಬೇಡ:
ಫೋನ್ ಚಾರ್ಜ್‌ಗೆ ಹಾಕಿದಾಗ ಗೇಮ್ ಆಡೋದು, ವಿಡಿಯೋ ನೋಡುವುದು, ಕಾಲ್‌ನಲ್ಲಿ ಹೆಚ್ಚು ಮಾತನಾಡುವುದು ಬ್ಯಾಟರಿಯನ್ನು ಹೆಚ್ಚು ಬಿಸಿ ಮಾಡಬಹುದು. ಇದರಿಂದ ಬ್ಯಾಟರಿ ಹಾನಿಯಾಗುವ ಸಾಧ್ಯತೆ ಹೆಚ್ಚುತ್ತದೆ.

ಅಸಲಿ ಚಾರ್ಜರ್ ಬಳಸಿ:
ಕಡಿಮೆ ದರದ ಅಥವಾ ನಕಲಿ ಚಾರ್ಜರ್‌ಗಳನ್ನು ಬಳಸಿದರೆ ವಿದ್ಯುತ್ ಒತ್ತಡ ಸರಿಯಾಗಿ ನಿಯಂತ್ರಣವಾಗದೆ ಬ್ಯಾಟರಿ ಬಿಸಿಯಾಗಬಹುದು. ಯಾವಾಗಲೂ ಮೂಲ ಚಾರ್ಜರ್ ಬಳಕೆ ಸುರಕ್ಷಿತ.

ಹೆಚ್ಚು ಬಿಸಿ ಇರುವ ಜಾಗದಲ್ಲಿ ಇಡಬೇಡಿ:
ಸೂರ್ಯನ ಕಿರಣ ಬೀಳುವ ಸ್ಥಳದಲ್ಲಿ ಅಥವಾ ಕಾರಿನೊಳಗೆ ಫೋನ್ ಬಿಡುವುದು ಅಪಾಯಕಾರಿ. ಇದರಿಂದ ಬ್ಯಾಟರಿ ತೀವ್ರವಾಗಿ ಬಿಸಿಯಾಗುತ್ತದೆ.

ರಾತ್ರಿ ತುಂಬಾ ಚಾರ್ಜ್ ಮಾಡಬೇಡಿ:
ಪೂರ್ಣ ಚಾರ್ಜ್ ಆದ ಮೇಲೂ ಫೋನ್ ಗಂಟೆಗಳ ಕಾಲ ಚಾರ್ಜ್‌ಗೆ ಇಡುವುದು ಬ್ಯಾಟರಿ ಮೇಲೆ ಒತ್ತಡ ತರುತ್ತದೆ.

ಬ್ಯಾಟರಿ ಊದಿಕೊಂಡರೆ ತಕ್ಷಣ ಬದಲಾಯಿಸಿ:
ಬ್ಯಾಟರಿ ಗಾತ್ರ ಬದಲಾಗಿರುವಂತೆ ಕಂಡರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಅಪಾಯದ ಸೂಚನೆ ಆಗಿರಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !