ಪ್ರತಿ ಸಂದರ್ಭದಲ್ಲೂ ಪ್ರತಿಕ್ರಿಯೆ ಮಾತಾಡ್ಲೇಬೇಕು ಅನ್ನೋ ಅನಿವಾರ್ಯ ಇಲ್ಲ. ಕೆಲವೊಮ್ಮೆ ನಾವು ಮಾತನಾಡುವ ಒಂದು ಮಾತು ಸಂಬಂಧಗಳನ್ನು ಹಾಳು ಮಾಡಬಹುದು, ಮನಸ್ಸಿಗೆ ನೋವುಂಟುಮಾಡಬಹುದು. ಅಂಥ ಸಮಯದಲ್ಲಿ ಮೌನವೇ ದೊಡ್ಡ ಉತ್ತರವಾಗುತ್ತದೆ. ಬದುಕಿನಲ್ಲಿ ಕೆಲವು ಸಂದರ್ಭಗಳಲ್ಲಿ ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ.
- ಆವೇಶದಲ್ಲಿ ಹೇಳಿದ ಮಾತು ಹಿಂತಿರುಗಿಸಿಕೊಳ್ಳಲು ಸಾಧ್ಯವಿಲ್ಲ. ಕ್ಷಣಿಕ ಕೋಪ ಶಮನವಾದ ಮೇಲೆ ಪಶ್ಚಾತ್ತಾಪ ಆಗಬಹುದು. ಅಂಥ ಸಮಯದಲ್ಲಿ ಸ್ವಲ್ಪ ಮೌನವಾಗಿರುವುದು ಉತ್ತಮ.
- ಕೆಲವರು ಜಗಳಕ್ಕೆ ಕಾರಣ ಹುಡುಕುತ್ತಾರೆ. ಪ್ರತಿಕ್ರಿಯೆ ನೀಡಿದರೆ ವಿಷಯ ಮತ್ತಷ್ಟು ಹೆಚ್ಚುತ್ತದೆ. ಮೌನವೇ ಅವರ ಪ್ರಯತ್ನವನ್ನು ವಿಫಲಗೊಳಿಸುತ್ತದೆ.
- ಎಲ್ಲ ವಿಚಾರ ತಿಳಿಯದೆ ಅಭಿಪ್ರಾಯ ಹೇಳುವುದು ತಪ್ಪು ಕಲ್ಪನೆ ಹುಟ್ಟಿಸಬಹುದು. ಮೊದಲು ಕೇಳಿ, ಅರ್ಥಮಾಡಿಕೊಂಡು ನಂತರ ಮಾತಾಡುವುದು ಸೂಕ್ತ.
- ಪ್ರತಿ ಟೀಕೆಗೆ ಉತ್ತರ ಕೊಡುವ ಅಗತ್ಯವಿಲ್ಲ. ಮೌನ ಕೆಲವೊಮ್ಮೆ ನಮ್ಮ ಆತ್ಮಗೌರವವನ್ನು ಕಾಪಾಡುತ್ತದೆ.
- ದುಃಖದ ಕ್ಷಣದಲ್ಲಿ ಮಾತುಗಳು ಸರಿಯಾಗಿ ಹೊರಬರುವುದಿಲ್ಲ. ಸ್ವಲ್ಪ ಸಮಯ ಕೊಟ್ಟು ಮನಸ್ಸು ಸಮತೋಲನಕ್ಕೆ ಬಂದ ಬಳಿಕ ಮಾತನಾಡುವುದು ಉತ್ತಮ.
- ಮೌನ ದುರ್ಬಲತೆ ಅಲ್ಲ. ಅದು ಸಂಯಮದ ಸಂಕೇತ. ಸರಿಯಾದ ಸಂದರ್ಭದಲ್ಲಿ ಮೌನ ಆಯ್ಕೆ ಮಾಡಿದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ತಪ್ಪಿಸಬಹುದು.



