February 14, 2026
Saturday, February 14, 2026
spot_img

ನಾಳೆ ಭಾರತದೊಂದಿಗೆ ಹ್ಯಾಂಡ್‌ಶೇಕ್ ಮಾಡುತ್ತಾ ಪಾಕ್? ಈ ಕುರಿತು ಸಲ್ಮಾನ್ ಆಘಾ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:


ಟಿ20 ವಿಶ್ವಕಪ್ ನಲ್ಲಿ ನಾಳೆ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಭಾರತದೊಂದಿಗೆ ಹಸ್ತಲಾಘವ ಮಾಡಲು ಕುರಿತು ಮಾತನಾಡಿದ್ದಾರೆ.

ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದನಾ ದಾಳಿ ಮತ್ತು ಆಪರೇಷನ್ ಸಿಂಧೂರ ನಂತರ ನಡೆದ ಏಷ್ಯಾಕಪ್ ವೇಳೆ ಮೂರು ಭಾರಿ ಮುಖಾಮುಖಿಯಾದರೂ ಭಾರತ ಮತ್ತು ಪಾಕಿಸ್ತಾನ ಆಟಗಾರರು ಪರಸ್ಪರ ಕೈಕುಲುಕಿಲ್ಲ.

ಇದೀಗ ನಾವು ಹಸ್ತಲಾಘವ ಬಗ್ಗೆ ನಾಳೆ ನೋಡೋಣ. ಆದಾಗ್ಯೂ, ಯಾವುದೇ ಸಂದರ್ಭದಲ್ಲೂ ‘ಸ್ಪಿರಿಟ್ ಆಫ್ ದಿ ಗೇಮ್’ ಅನ್ನು ಎತ್ತಿಹಿಡಿಯಬೇಕು’ ಎಂದು ಪ್ರತಿಕ್ರಿಯೆ ನೀಡಿದರು.

ಸರಿಯಾದ ಉತ್ಸಾಹದಲ್ಲಿ ಆಡಬೇಕು. ನನ್ನ ವೈಯಕ್ತಿಕ ಅಭಿಪ್ರಾಯವು ಅಪ್ರಸ್ತುತವಾಗಬಹುದು. ಆದರೆ, ಕ್ರಿಕೆಟ್ ಅನ್ನು ಯಾವಾಗಲೂ ಹೇಗೆ ಆಡಬೇಕೆಂದು ಉದ್ದೇಶಿಸಲಾಗಿದೆಯೋ ಅದರ ಪ್ರಕಾರವೇ ಆಡಬೇಕು ಎಂದು ಆಘಾ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !