ಹೊಸದಿಗಂತ ಡಿಜಿಟಲ್ ಡೆಸ್ಕ್ :
ಟಿ20 ವಿಶ್ವಕಪ್ ನಲ್ಲಿ ನಾಳೆ ಭಾರತ ಹಾಗು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇತ್ತ ಈ ಬಾರಿ ಎರಡು ಟೀಮ್ ಹ್ಯಾಂಡ್’ಶೇಕ್ ಮಾಡುತ್ತಾರಾ ಎನ್ನುವುದು ಎಲ್ಲರ ಪ್ರಶ್ನೆಯಾಗಿದ್ದು, ಈಗಾಗಲೇ ಈ ಕುರಿತು ಮಾತನಾಡಿದ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ, ನಾವು ಅದರ ಬಗ್ಗೆ ನಾಳೆ ನೋಡೋಣ. ಆದಾಗ್ಯೂ, ಯಾವುದೇ ಸಂದರ್ಭದಲ್ಲೂ ‘ಸ್ಪಿರಿಟ್ ಆಫ್ ದಿ ಗೇಮ್’ ಅನ್ನು ಎತ್ತಿಹಿಡಿಯಬೇಕು ಎಂದು ಹೇಳಿದ್ದರು.
ಇದೀಗ ಈ ಕುರಿತು ಟೀಮ್ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ ಮುಂದೆಯೂ ಪ್ರಶ್ನೆ ಬಂದಿದ್ದು, ಟಾಸ್‌ನಲ್ಲಿ ಹ್ಯಾಂಡ್‌ಶೇಕ್ ಬಗ್ಗೆ ನೋಡೋಣ. ಅದಕ್ಕೆ 24 ಗಂಟೆ ಕಾಯಿರಿ ಎಂದಷ್ಟೇ ಹೇಳಿದ್ದಾರೆ.
ಇನ್ನೂ ಭಾರತೀಯ ಆಟಗಾರರು ಎದುರಾಳಿಯತ್ತ ಗಮನಹರಿಸದೆ ತಮ್ಮ ಮೇಲೆಯೇ ಗಮನಹರಿಸುತ್ತಾರೆ. ಯಾರು ಉತ್ತಮವಾಗಿ ಕ್ರಿಕೆಟ್ ಆಡುತ್ತಾರೋ ಅವರು ಪಂದ್ಯವನ್ನು ಗೆಲ್ಲುತ್ತಾರೆ. ಅದೊಂದೇ ಮುಖ್ಯ ಎಂದು ಅವರು ಹೇಳಿದರು.



