June 24, 2026
Wednesday, June 24, 2026
spot_img

ರಣವೀರ್ ಸಿಂಗ್ ಬಳಿಕ ಬಿಗ್ ಬಾಸ್ ಸ್ಪರ್ಧಿಗೂ ಬಂತು ಜೀವ ಬೆದರಿಕೆ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ಜೀವ ಬೆದರಿಕೆಗಳು ಬರುವುದು ಹೆಚ್ಚಾಗುತ್ತಿದ್ದು, ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಬಳಿಕ ಇದೀಗ ಬಿಗ್ ಬಾಸ್ 13 ರ ಸ್ಪರ್ಧಿ ಹಿಮಾಂಶಿ ಖುರಾನಾ ಅವರಿಗೆ ಕೊಲೆ ಬೆದರಿಕೆಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ನಟಿ ಪೊಲೀಸರಿಗೆ ದೂರು ನೀಡಿದ್ದು, 10 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ವಾಂಟೆಡ್ ಅಪರಾಧಿ ಆಗಿರುವ ಜೀಶನ್ ಅಖ್ತರ್ ಈ ಬೆದರಿಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಬೆದರಿಕೆಯ ಹಿಂದಿನ ಕಾರಣ ತಿಳಿಯಲು ಭದ್ರತಾ ಸಂಸ್ಥೆಗಳು ಆಡಿಯೋ ಕ್ಲಿಪ್ ಅನ್ನು ಪರಿಶೀಲಿಸುತ್ತಿವೆ.ಈ ಬೆದರಿಕೆಯ ನಂತರ, ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದ್ದು, ತನಿಖೆ ಮಾಡಲಾಗುತ್ತಿದೆ.

ವರದಿಗಳ ಪ್ರಕಾರ, ಹಿಮಾಂಶಿ ಖುರಾನಾ ಅವರಿಗೆ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ದೂರು ಸ್ವೀಕರಿಸಿದ ಪಂಜಾಬ್ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !