October 3, 2026
Saturday, October 3, 2026
spot_img

ಆಗ್ರಾ ವಾಯುಪಡೆ ನಿಲ್ದಾಣದೊಳಗೆ ಪಾಕಿಸ್ತಾನ ಬಲೂನ್ ಪತ್ತೆ: ಭಾರತೀಯ ಸೇನೆಯಿಂದ ತನಿಖೆ ಚುರುಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗ್ರಾದ ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದೊಳಗೆ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೆಸರಿರುವ ಬಲೂನ್ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಇದರಲ್ಲಿ ಯಾವುದೇ ಸಾಧನ ಅಥವಾ ವಿಷಕಾರಿ ವಸ್ತು ಪತ್ತೆಯಾಗಿಲ್ಲ. ಆದರೂ ಭಾರತೀಯ ಸೇನೆಯು ಗಂಭೀರವಾಗಿ ಪರಿಗಣಿಸಿದ್ದು, ತೀವ್ರ ತನಿಖೆಯನ್ನು ನಡೆಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ವಿಮಾನ ಆಕಾರದ ಬಲೂನ್ ವಾಯುನೆಲೆಯ ನಿರ್ಬಂಧಿತ ತಾಂತ್ರಿಕ ವಲಯದಲ್ಲಿ ಪತ್ತೆಯಾಗಿದೆ. ಬಲೂನ್ ಹಸಿರು ಮತ್ತು ಬಿಳಿ ಬಣ್ಣದ್ದಾಗಿದ್ದು ಉರ್ದು ಭಾಷೆಯಲ್ಲಿ ಕೆಲವು ಬರಹಗಳನ್ನು ಹೊಂದಿದೆ. ಅದನ್ನು ವಶಪಡಿಸಿಕೊಂಡು ಶಹಗಂಜ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

ಘಟನೆಯ ಕುರಿತು ಪೊಲೀಸರು, ಗುಪ್ತಚರ ಸಂಸ್ಥೆಗಳು ಮತ್ತು ಭಾರತೀಯ ವಾಯುಪಡೆಯು ತನಿಖೆ ನಡೆಸುತ್ತಿದೆ. ಬಲೂನ್ ಹೇಗೆ ಹೈ-ಸೆಕ್ಯುರಿಟಿ ತಾಂತ್ರಿಕ ವಲಯವನ್ನು ಪ್ರವೇಶಿಸಿತು ಎಂಬುದನ್ನು ನಿರ್ಧರಿಸಲು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಸಿಂಗ್ ಮಾತನಾಡಿ, ಬಲೂನ್ ಒಳಗೆ ಯಾವುದೇ ತಾಂತ್ರಿಕ ಸಾಧನ ಅಥವಾ ವಿಷಕಾರಿ ಅನಿಲ ಪತ್ತೆಯಾಗಿಲ್ಲ. ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.

Must Read