April 10, 2026
Friday, April 10, 2026
spot_img

ನಾಳೆಯಿಂದ ಸಿಬಿಎಸ್​ಸಿ 10ನೇ ತರಗತಿ ಬೋರ್ಡ್​ ಪರೀಕ್ಷೆ ಶುರು: ಮೊದಲ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಇಂದು 10ನೇ ತರಗತಿಯ ಬೋರ್ಡ್​ ಪರೀಕ್ಷೆ ಅರ್ಹತಾ ನಿಯಮಗಳ ಕುರಿತು ಮಹತ್ವದ ಘೋಷಣೆ ಮಾಡಿದ್ದು, 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಬೋರ್ಡ್ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ತಿಳಿಸಿದೆ.

2026ರ ಬೋರ್ಡ್​ ಪರೀಕ್ಷೆಗಳು ನಾಳೆಯಿಂದ ಆರಂಭವಾಗಲಿದ್ದು, ಅದರ ಮೊದಲು ಕೆಲವು ಮಾಹಿತಿ ನೀಡಿದ ಇಲಾಖೆ, ಸಿಬಿಎಸ್​ಸಿಯ ಮೊದಲ ಆವೃತ್ತಿಯಲ್ಲಿ ಕನಿಷ್ಠ ಮೂರು ವಿಷಯಗಳನ್ನು ಪ್ರಯತ್ನಿಸುವುದು ಅವಶ್ಯಕ. ಮೂರು ಪತ್ರಿಕೆಗಳಿಗೆ ಹಾಜರಾಗದ ವಿದ್ಯಾರ್ಥಿಗಳು ಎರಡನೇ ಆವೃತ್ತಿ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ. ಅವರು ಮುಂದಿನ ವರ್ಷ ಎದುರಾಗಲಿರುವ ಮೊದಲ ಪರೀಕ್ಷೆಯಲ್ಲಿ ಮತ್ತೆ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದೆ.

ಮೊದಲ ಪರೀಕ್ಷೆ ಬರೆದು ಪಾಸ್​ ಆದ ಎಲ್ಲಾ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಉತ್ತಮಗೊಳಿಸಬೇಕು ಬಯಸಿದ್ದಲ್ಲಿ ಮತ್ತೆ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಷಯಗಳ ಪರೀಕ್ಷೆಯನ್ನು ಎರಡನೇ ಬೋರ್ಡ್​ ಪರೀಕ್ಷೆಯಲ್ಲಿ ಎದುರಿಸಿ, ಅಂಕ ಗಳಿಸಿಕೊಳ್ಳಬಹುದು ಎಂದು ಸಿಬಿಎಸ್​ಇ ಪರೀಕ್ಷಾ ನಿಯಂತ್ರಕರಾದ ಸನ್ಯಾಂ ಭಾರದ್ವಾಜ್​ ತಿಳಿಸಿದ್ದಾರೆ.

ಮೊದಲ ಪರೀಕ್ಷೆಯಲ್ಲಿ ವಿದ್ಯಾರ್ಥಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪರೀಕ್ಷೆಯನ್ನು ಎದುರಿಸಲು ವಿಫಲರಾದರೆ, ಅವರು ಯಾವುದೇ ಕಾರಣಕ್ಕೂ ಎರಡನೇ ಪರೀಕ್ಷೆಯಲ್ಲಿ ಕೂರಲು ಅರ್ಹತೆ ಪಡೆಯುವುದಿಲ್ಲ. ಇಂತಹ ವಿದ್ಯಾರ್ಥಿಗಳನ್ನು ಅಗತ್ಯ ಪುನರಾವರ್ನತೆ ವಿಭಾಗದಲ್ಲಿ ಸೇರಿಸಲಾಗುವುದು. ಅವರು ಮತ್ತೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಎದುರಾಗಲಿರುವ ಪರೀಕ್ಷೆಗೆ ಮಾತ್ರ ಹಾಜರಾಗಬಹುದು ಎಂದು ತಿಳಿಸಲಾಗಿದೆ.

ನಾಳೆಯಿಂದ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗಲಿದೆ. 10ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10ರ ನಂತರ ಪ್ರವೇಶ ನಿಷೇಧದ ನಿಯಮ, ಶೇ.75ರಷ್ಟು ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಎದುರಿಸಲು ಅವಕಾಶದಂತಹ ನಿಯಮಗಳನ್ನು ಒಳಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !