February 17, 2026
Tuesday, February 17, 2026
spot_img

ಬರೀ ಕನಸಿನ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ: ರಾಹುಲ್‌ ಗಾಂಧಿ ವಿರುದ್ಧ ನವಜೋತ್ ಕೌರ್ ಸಿಧು ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದು ಕಾಂಗ್ರೆಸ್‌ನ ಮಾಜಿ ನಾಯಕಿ ನವಜೋತ್ ಕೌರ್ ಸಿಧು ಭವಿಷ್ಯ ನುಡಿದಿದ್ದಾರೆ .

ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನವಜೋತ್ ಕೌರ್ ಸಿಧು, ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ತಮ್ಮ ರಾಜಕೀಯದಲ್ಲಿ ಎಂದಿಗೂ ತಳಮಟ್ಟದಲ್ಲಿ ಕೆಲಸ ಮಾಡಿಲ್ಲ. ಅವರಿಗೆ ಎಲ್ಲಿ ಏನು ಆಗುತ್ತಿದೆ ಎಂದು ಗೊತ್ತಿಲ್ಲ . ಒಬ್ಬ ರಾಜಕಾರಣಿ ವಾಸ್ತವದೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ, ನೀವು ಬರೀ ಕನಸಿನ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಗುಡುಗಿದರು.

ನಾನು ಎಂಟು ತಿಂಗಳಿಂದ ರಾಹುಲ್ ಗಾಂಧಿ ಅವರ ಭೇಟಿಗೆ ಪ್ರಯತ್ನಿಸಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರು ಮಾಡುತ್ತಿರುವ ಅನ್ಯಾಯ ಮತ್ತು ಪಕ್ಷದ ಅವನತಿಯ ತಿಳಿಸಲು. ನಿಮ್ಮ ಪಕ್ಷವು ಪಂಜಾಬ್‌ನಲ್ಲಿ ನಾಶವಾಗುತ್ತಿದೆ ಎಂದು ಹೇಳಲು ನಾನು ನಿಮ್ಮ ಭೇಟಿ ಕೇಳಿದ್ದೆ.ಆದ್ರೆ ನಿಮಗೆ ನಿಮ್ಮ ಕೆಳಗಿರುವವರು ಏನು ಮಾಡುತ್ತಿದ್ದಾರೆ ಎಂಬ ಅರಿವು ಇಲ್ಲ, ಹಾಗಾಗಿ ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ ಎಂದು ವಾಗ್ದಾಳಿ ನಡೆಸಿದರು.

ನನಗೆ ಏಳು ಇಲಾಖೆಗಳೊಂದಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ನನಗೆ ಸಂಸದ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ನೀವು ಯಾವುದನ್ನೂ ನೀಡಲಿಲ್ಲ. ಇದಕ್ಕೆ ಕಾರಣ ನಿಮ್ಮ ಸುತ್ತಲೂ ಭ್ರಷ್ಟರೇ ತುಂಬಿರುವಾಗ ನೀವು ಭ್ರಷ್ಟಾಚಾರದ ವಿರುದ್ಧ ಹೇಗೆ ಮಾತನಾಡುತ್ತೀರಿ? ಎಂದು ರಾಹುಲ್ ಗಾಂಧಿ ವಿರುದ್ಧ ಗುಡುಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !