February 18, 2026
Wednesday, February 18, 2026
spot_img

ಕರಾವಳಿಗೂ ತಟ್ಟಿದ ಮಾಲಿನ್ಯದ ಬಿಸಿ: ಬೆಚ್ಚಿಬೀಳಿಸುತ್ತಿದೆ ಉಡುಪಿ-ಮಂಗಳೂರಿನ ‘ಏರ್ ಕ್ವಾಲಿಟಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಜನತೆಗೆ ಈಗ ಶುದ್ಧ ಗಾಳಿಯೇ ದುಬಾರಿಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೆ, ಕರಾವಳಿಯ ಮಂಗಳೂರು, ಉಡುಪಿ ಹಾಗೂ ಕಲ್ಯಾಣ ಕರ್ನಾಟಕದ ಬಳ್ಳಾರಿಯಲ್ಲಿಯೂ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾಲಿನ್ಯವು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 190 AQI ದಾಖಲಿಸುವ ಮೂಲಕ ಆತಂಕಕಾರಿ ಮಟ್ಟ ತಲುಪಿದೆ. ಕೈಗಾರಿಕಾ ನಗರಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕ 168 ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲಿ ಇಂದು 156 AQI ದಾಖಲಾಗಿದ್ದು, ‘ಕಳಪೆ’ ವಿಭಾಗದಲ್ಲೇ ಮುಂದುವರಿದಿದೆ.

ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಅಂಕಿ-ಅಂಶಗಳಲ್ಲಿ ಸಣ್ಣ ಪ್ರಮಾಣದ ಏರುಪೇರು ಕಂಡುಬಂದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆಯುಳ್ಳವರು ಈ ವಿಷಗಾಳಿಯಿಂದ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !