April 15, 2026
Wednesday, April 15, 2026
spot_img

ಮಳೆಯೇ ಪಾಕಿಸ್ತಾನಕ್ಕೆ ವರ: ಮ್ಯಾಚ್ ರದ್ದಾದರೂ ಪಾಕ್ ಪಡೆ ಸೂಪರ್-8ಗೆ ಎಂಟ್ರಿ!

ಟಿ20 ವಿಶ್ವಕಪ್‌ನ ರೋಚಕತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಪಂದ್ಯಗಳ ಫಲಿತಾಂಶದ ಮೇಲೆ ಈಗ ಮಳೆರಾಯ ತನ್ನ ಪ್ರಭಾವ ಬೀರಲಾರಂಭಿಸಿದ್ದಾನೆ. 32ನೇ ಪಂದ್ಯದಲ್ಲಿ ಝಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೇ, ಗುಂಪು ಹಂತದ ಲೆಕ್ಕಾಚಾರಗಳು ಸಂಪೂರ್ಣ ಬದಲಾಗಿವೆ.

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಗೆ ಆಹುತಿಯಾದ ಕಾರಣ, ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. ಈ ಒಂದು ಅಂಕದ ನೆರವಿನಿಂದ ಒಟ್ಟು 5 ಅಂಕಗಳನ್ನು ಗಳಿಸಿದ ಝಿಂಬಾಬ್ವೆ ಅಧಿಕೃತವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.

ಇಂದು ಕೊಲಂಬೊದಲ್ಲಿ ಪಾಕಿಸ್ತಾನ ಮತ್ತು ನಮೀಬಿಯಾ ಮುಖಾಮುಖಿಯಾಗಬೇಕಿದೆ. ಪಾಕ್ ತಂಡಕ್ಕೆ ಇದು ಅತ್ಯಂತ ನಿರ್ಣಾಯಕ ಪಂದ್ಯ. ವಿಶೇಷವೆಂದರೆ, ಇಲ್ಲಿ ಪಾಕಿಸ್ತಾನದ ಗೆಲುವಿಗಿಂತ ಹೆಚ್ಚಾಗಿ ‘ಮಳೆ’ ಅವರ ಪಾಲಿಗೆ ವರವಾಗುವ ಸಾಧ್ಯತೆಯಿದೆ.

ಪಾಕಿಸ್ತಾನದ ಖಾತೆಗೆ ಒಂದು ಅಂಕ ಸೇರ್ಪಡೆಯಾಗುತ್ತದೆ. ಆಗ ಪಾಕ್ ಒಟ್ಟು 5 ಅಂಕಗಳೊಂದಿಗೆ ಸುಲಭವಾಗಿ ಸೂಪರ್-8 ಹಂತಕ್ಕೇರುತ್ತದೆ.

ಸದ್ಯ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಉತ್ತಮ ನೆಟ್ ರನ್ ರೇಟ್ (+0.787) ಹೊಂದಿರುವ ಯುಎಸ್‌ಎ ತಂಡವು ಪಾಕಿಸ್ತಾನದ ಸೋಲಿಗಾಗಿ ಪ್ರಾರ್ಥಿಸುತ್ತಿದೆ. ಒಂದು ವೇಳೆ ನಮೀಬಿಯಾ ತಂಡ ಪಾಕಿಸ್ತಾನವನ್ನು ಸೋಲಿಸಿದರೆ ಮಾತ್ರ ಯುಎಸ್‌ಎ ಮುಂದಿನ ಹಂತಕ್ಕೆ ಹೋಗಲು ಸಾಧ್ಯ. ಮಳೆ ಬಂದು ಪಂದ್ಯ ರದ್ದಾದರೂ ಅಥವಾ ಪಾಕ್ ಗೆದ್ದರೂ ಯುಎಸ್‌ಎ ಟೂರ್ನಿಯಿಂದ ಹೊರಬೀಳಲಿದೆ.

ಪಾಕಿಸ್ತಾನದ ಸೂಪರ್-8 ಹಾದಿಯನ್ನು ಮಳೆರಾಯ ಸುಗಮಗೊಳಿಸುವ ಲಕ್ಷಣಗಳು ಕಾಣುತ್ತಿವೆ. ಕೊಲಂಬೊದ ಮೋಡ ಕವಿದ ವಾತಾವರಣ ಯಾರ ಪಾಲಿಗೆ ಸಂಭ್ರಮ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !