February 18, 2026
Wednesday, February 18, 2026
spot_img

‘ಶತಕ್’ ಕೇವಲ ಸಿನಿಮಾವಲ್ಲ, ಇದೊಂದು ಸೈದ್ಧಾಂತಿಕ ಪಯಣ: ಚಿತ್ರದ ಕುರಿತು ಡಾ.ಮೋಹನ್ ಭಾಗವತ್ ಮೆಚ್ಚುಗೆಯ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ನಿರ್ಮಾಣವಾಗಿರುವ ‘ಶತಕ್’ ಚಿತ್ರದ ಕುರಿತು ದಿನೇ ದಿನೇ ಕುತೂಹಲ ಹೆಚ್ಚುತ್ತಿದೆ.

ಇತ್ತೀಚೆಗೆ ನವದೆಹಲಿಯ ಕೇಶವ ಕುಂಜದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆರೆಸ್ಸೆಸ್ ಸರಸಂಘ ಚಾಲಕ್ ಡಾ.ಮೋಹನ್ ಭಾಗವತ್ ಅವರು, ಈ ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. “ಶತಕ್ ಕೇವಲ ಒಂದು ಸಿನಿಮಾವಲ್ಲ, ಇದು ಒಂದು ಸೈದ್ಧಾಂತಿಕ ಸಿದ್ಧಾಂತದ ಜೀವನ ಪಯಣದ ಚಿತ್ರಣ” ಎಂದು ಅವರು ಬಣ್ಣಿಸಿದರು.

ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಜೀವನವನ್ನು ಸ್ಮರಿಸಿದ ಭಾಗವತ್ ಅವರು, “ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರ ಸಂಘಟನೆ ಮತ್ತು ಸಾಮಾಜಿಕ ಜಾಗೃತಿಗಾಗಿ ಮುಡಿಪಾಗಿಟ್ಟವರು. ಅವರ ಬದುಕು ತ್ಯಾಗ, ಶಿಸ್ತು ಮತ್ತು ರಾಷ್ಟ್ರೀಯ ಏಕತೆಯ ಅಚಲ ಸಂಕಲ್ಪದ ಸಂಕೇತವಾಗಿದೆ” ಎಂದರು.

ಮುಂದುವರಿದು ಮಾತನಾಡಿದ ಅವರು, “ಡಾ. ಹೆಡ್ಗೆವಾರ್ ಅವರ ಜೀವನದ ಅನೇಕ ಸ್ಫೂರ್ತಿದಾಯಕ ಘಟನೆಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ವಿಶೇಷವಾಗಿ ಚಿತ್ರದ ಒಂದು ಹಾಡು, ಅವರ ಬಾಲ್ಯದ ಒಂದು ಪ್ರಮುಖ ಘಟನೆಯನ್ನು ಅತ್ಯಂತ ಮರ್ಮಸ್ಪರ್ಶಿಯಾಗಿ ಚಿತ್ರಿಸಿದೆ. ಇದು ಅವರ ವ್ಯಕ್ತಿತ್ವಕ್ಕೆ ಹೇಗೆ ಶಕ್ತಿ ಮತ್ತು ಧೈರ್ಯವನ್ನು ತುಂಬಿತು ಎಂಬುದನ್ನು ತೋರಿಸುತ್ತದೆ,” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಚಿತ್ರತಂಡದ ಶ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು.

ಆರೆಸ್ಸೆಸ್‌ನ ನೂರು ವರ್ಷಗಳ ಸುದೀರ್ಘ ಪಯಣವನ್ನು ಸಾರುವ ‘ಶತಕ್’ ಚಿತ್ರವು ಫೆಬ್ರವರಿ 20ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !