February 18, 2026
Wednesday, February 18, 2026
spot_img

ಲಂಕಾ ಪಡೆಗೆ ‘ಪತಿರಾನ’ ಪೆಟ್ಟು: ಸೂಪರ್-8 ಸಂಭ್ರಮದ ಬೆನ್ನಲ್ಲೇ ಆತಿಥೇಯರಿಗೆ ಆಘಾತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ 2026ರ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿರುವ ಆತಿಥೇಯ ಶ್ರೀಲಂಕಾ ತಂಡಕ್ಕೆ ಸಂಭ್ರಮದ ನಡುವೆಯೇ ಬರಸಿಡಿಲು ಬಡಿದಂತಾಗಿದೆ. ತಂಡದ ಪ್ರಮುಖ ವೇಗಿ, ‘ಬೇಬಿ ಮಾಲಿಂಗ’ ಖ್ಯಾತಿಯ ಮಥಿಶಾ ಪತಿರಾನ ಸ್ನಾಯು ಸೆಳೆತದ ಗಾಯದಿಂದಾಗಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಪತಿರಾನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಗಾಯದ ತೀವ್ರತೆಯಿಂದಾಗಿ ಅವರು ತಮ್ಮ ಮೊದಲ ಓವರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಮೈದಾನದಿಂದ ಹೊರನಡೆದಿದ್ದರು. ಸದ್ಯದ ವರದಿಗಳ ಪ್ರಕಾರ, ಅವರು ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ.

ಈ ಗಾಯವು ಕೇವಲ ಶ್ರೀಲಂಕಾಕ್ಕೆ ಮಾತ್ರವಲ್ಲದೆ, ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಭಾರಿ ಆತಂಕ ತಂದಿದೆ. ಇತ್ತೀಚಿನ ಮೆಗಾ ಹರಾಜಿನಲ್ಲಿ ಕೆಕೆಆರ್ ಪತಿರಾನ ಅವರನ್ನು 18 ಕೋಟಿ ರೂ. ನೀಡಿ ಖರೀದಿಸಿತ್ತು. ಈಗಾಗಲೇ ಹರ್ಷಿತ್ ರಾಣಾ ಗಾಯಗೊಂಡಿದ್ದು, ಮುಸ್ತಾಫಿಜುರ್ ಅವರನ್ನು ತಂಡದಿಂದ ಕೈಬಿಟ್ಟಿರುವುದರಿಂದ ಪತಿರಾನ ಅವರ ಗಾಯ ಕೆಕೆಆರ್ ಮ್ಯಾನೇಜ್‌ಮೆಂಟ್‌ಗೆ ನುಂಗಲಾರದ ತುತ್ತಾಗಿದೆ.

ಪತಿರಾನ ಅಲಭ್ಯತೆಯಲ್ಲಿ ತಂಡವನ್ನು ಸೇರಿಕೊಳ್ಳಲು ನುವಾನ್ ತುಷಾರ, ಮಿಲನ್ ರತ್ನಾಯಕೆ, ಬಿನುರಾ ಫರ್ನಾಂಡೊ ಅಥವಾ ದಿಲ್ಶನ್ ಮಧುಶಂಕ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬದಲಿ ಆಟಗಾರನ ಹೆಸರನ್ನು ಶೀಘ್ರದಲ್ಲೇ ಐಸಿಸಿ ತಾಂತ್ರಿಕ ಸಮಿತಿಗೆ ಸಲ್ಲಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !