February 18, 2026
Wednesday, February 18, 2026
spot_img

ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ, ಆದರೆ ಈ ರೂಲ್ಸ್‌ ಫಾಲೋ ಮಾಡ್ಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆಯಿಂದಲೇ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭವಾಗಲಿದೆ.

ರಾಜ್ಯ ಸರ್ಕಾರ ಶೇ. 50% ಸಫಾರಿ ಪ್ರಾರಂಭಕ್ಕೆ ಮಾತ್ರ ಅನುಮತಿ ನೀಡಿದೆ. ಅಂದರೆ ಈ ಹಿಂದೆ ಬಳಕೆ ಮಾಡ್ತಿದ್ದ ಶೇ.50% ರಷ್ಟು ಮಾತ್ರ ವಾಹನಗಳ ಬಳಕೆ ಮಾಡಲು ನಿರ್ಧರಿಸಲಾಗಿದೆ. ಬಂಡೀಪುರದಲ್ಲಿ 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿದ್ದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ.

ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿದ್ದು, ಕಳೆದ ವರ್ಷ ನಾಗರಹೊಳೆ, ಬಂಡೀಪುರದಲ್ಲಿ ಹುಲಿ ದಾಳಿಗೆ ಅನೇಕರು ಮೃತಪಟ್ಟಿದ್ದರು. ಪ್ರತಿ ಜೀವವೂ ಅಮೂಲ್ಯ. ಈ ಒಂದೇ ಕಾರಣದಿಂದಾಗಿ ಸಫಾರಿ ಬಂದ್‌ ಮಾಡಲಾಗಿತ್ತು.

ಅರಣ್ಯ ಸಚಿವ ಆದ ಮೇಲೆ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನೇಕ ಕ್ರಮ ಕೈಗೊಂಡಿದ್ದೇವೆ. ಕ್ರಮ ಕೈಗೊಂಡರೂ ಕೂಡ ಪ್ರತಿ ವರ್ಷ 45-50 ಜನ ಸಾಯ್ತಾ ಇದ್ದಾರೆ. ಇದು ನೋವಿನ ಸಂಗತಿ. ಇದೀಗ ಮತ್ತೆ ನಾಗರಹೊಳೆ, ಬಂಡೀಪುರದಲ್ಲಿ ನಾಳೆಯಿಂದ ಸಫಾರಿ ಪುನರಾರಂಭ ಎಂದು ತಿಳಿಸಿದ್ದಾರೆ.

ಆದರೆ ಸಫಾರಿ ಪುನಃ ಆರಂಭಿಸಿದ್ದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ನಾಳೆ ಬಂಡೀಪುರ ಮೇಲುಕಾಮನಹಳ್ಳಿಯ ಅರಣ್ಯ ಕಚೇರಿಗೆ ಮುತ್ತಿಗೆಗೆ ನಿರ್ಧರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !