February 18, 2026
Wednesday, February 18, 2026
spot_img

ಸಂಜೆ 4ಕ್ಕೆ ಕಚೇರಿಯಿಂದ ಹೊರಡಿ: ಮುಸ್ಲಿಂ ನೌಕರರಿಗೆ ರಂಜಾನ್ ಬಂಪರ್ ಘೋಷಿಸಿದ ತೆಲಂಗಾಣ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ರಂಜಾನ್ ಹಬ್ಬದ ಉಪವಾಸ ಶುರುವಾಗಲಿದ್ದು, ಈ ಹಿನ್ನೆಲೆ ತೆಲಂಗಾಣ ಸರ್ಕಾರ ಮುಸ್ಲಿಂ ನೌಕರರಿಗೆ ಇಡೀ ತಿಂಗಳು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಬಹುದಾಗಿದೆ ಎಂಬ ಎಂಬ ಸೂಚನೆ ನೀಡಿದೆ.

ರಾಜ್ಯಾದ್ಯಂತ ಟೀಚರ್‌ಗಳು, ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ಸಿಬ್ಬಂದಿ, ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುವವರಿಗೆ ಸೇರಿದಂತೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಇದು ಅನ್ವಯವಾಗಲಿದೆ. ಇಂದಿನಿಂದ ಸುಮಾರು 30 ದಿನಗಳವರೆಗೆ ತೆಲಂಗಾಣದ ಮುಸ್ಲಿಂ ನೌಕರರು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಬಹುದಾಗಿದೆ.

ಇತ್ತ ಸರಕಾರದ ಈ ನಡೆಯನ್ನು ಬಿಜೆಪಿ ಟೀಕಿಸಿದ್ದು, ವೋಟ್‌ಗಾಗಿ ಓಲೈಕೆ ಎಂದು ಕರೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !