April 9, 2026
Thursday, April 9, 2026
spot_img

Kitchen Tips |ಬೆಂಡೆಕಾಯಿ ಫ್ರೆಶ್ ಆಗಿರ್ಬೇಕು ಅಂದ್ರೆ ಹೀಗೆ ಸ್ಟೋರ್​ ಮಾಡಿ ಇಡಿ!

ಬೆಂಡೆಕಾಯಿ ತಾಜಾ ಇರೋದು ರುಚಿಯಾದ ಪಲ್ಯ ಅಥವಾ ಸಾಂಬಾರ್ ಮಾಡಲು ತುಂಬಾ ಮುಖ್ಯ. ಆದರೆ ಸರಿಯಾಗಿ ಸ್ಟೋರ್ ಮಾಡಿಲ್ಲ ಅಂದ್ರೆ ಬೇಗನೆ ಹಾಳಾಗೋದು, ಕಪ್ಪಾಗೋದು ಅಥವಾ ಹುರಿಯುವಾಗ ಅಂಟಿಕೊಳ್ಳೋದು ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದ್ರೆ ಬೆಂಡೆಕಾಯಿಯನ್ನು ಹೆಚ್ಚು ದಿನ ಫ್ರೆಶ್ ಆಗಿ ಉಳಿಸಿಕೊಳ್ಳಬಹುದು.

ಮೊದಲಿಗೆ ಬೆಂಡೆಕಾಯಿಯನ್ನು ಮನೆಗೆ ತಂದ ಕೂಡಲೇ ತೊಳೆಯಬೇಡಿ. ನೀರು ತಗುಲಿದ್ರೆ ಅದು ಬೇಗ ಹಾಳಾಗುತ್ತದೆ. ಬಳಕೆ ಮಾಡುವ ಮುನ್ನ ಮಾತ್ರ ತೊಳೆಯುವುದು ಉತ್ತಮ. ತಾಜಾ ಬೆಂಡೆಕಾಯಿ ಆಯ್ಕೆ ಮಾಡುವಾಗ ಗಟ್ಟಿಯಾಗಿದ್ದು, ಒತ್ತಿದಾಗ ಸುಲಭವಾಗಿ ಮುರಿಯುವಂತಿರಬೇಕು.

ಸ್ಟೋರ್ ಮಾಡುವಾಗ ಬೆಂಡೆಕಾಯಿಯನ್ನು ಒಣ ಕಾಗದ ಅಥವಾ ಟಿಷ್ಯೂನಲ್ಲಿ ಸುತ್ತಿ ಗಾಳಿ ಹೋಗುವ ಕವರ್‌ನಲ್ಲಿ ಇಡಿ. ಸಂಪೂರ್ಣ ಗಾಳಿ ಆಡದ ಪ್ಲಾಸ್ಟಿಕ್ ಕವರ್ ಬಳಸಿದರೆ ಒಳಗೆ ತೇವಾಂಶ ಜಾಸ್ತಿಯಾಗಿ ಬೇಗನೆ ಹಾಳಾಗಬಹುದು. ಫ್ರಿಜ್‌ನ ತರಕಾರಿ ಡ್ರಾಯರ್‌ನಲ್ಲಿ ಇಡುವುದು ಉತ್ತಮ.

ಇದನ್ನೂ ಓದಿ:

ಕತ್ತರಿಸಿದ ಬೆಂಡೆಕಾಯಿಯನ್ನು ಹೆಚ್ಚು ಸಮಯ ಇಡುವುದನ್ನು ತಪ್ಪಿಸಿ. ಕತ್ತರಿಸಿದ ನಂತರ ತಕ್ಷಣವೇ ಅಡುಗೆಗೆ ಬಳಸಿದರೆ ರುಚಿ ಮತ್ತು ತಾಜಾತನ ಉಳಿಯುತ್ತದೆ.

ಈ ಸರಳ ವಿಧಾನಗಳನ್ನು ಅನುಸರಿಸಿದ್ರೆ ಬೆಂಡೆಕಾಯಿ ಹಲವು ದಿನಗಳು ತಾಜಾ ಆಗಿ ಇರುತ್ತದೆ. ಅಡುಗೆ ಮಾಡುವಾಗಲೂ ಅದರ ಸ್ವಾಭಾವಿಕ ರುಚಿ ಕಾಪಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !