October 18, 2026
Sunday, October 18, 2026
spot_img

ಬಜೆಟ್‌ನಲ್ಲಿ ನಮಗಾಗಿ 200 ಕೋಟಿ ರೂ. ಅನುದಾನ ಕೊಡಿ: ತೃತೀಯ ಲಿಂಗ ಸಮುದಾಯ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಜೆಟ್‌ನಲ್ಲಿ ನಮಗೂ ಅನುದಾನ ಕೊಡಿ ಎಂದು ತೃತೀಯ ಲಿಂಗ ಸಮುದಾಯ ಬೇಡಿಕೆ ಇಟ್ಟಿದೆ.

ಮಾರ್ಚ್‌ನಲ್ಲಿ ಈ ಬಾರಿಯ ಬಜೆಟ್‌ ಮಂಡನೆ ಆಗಲಿದ್ದು, ತೃತೀಯ ಲಿಂಗ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ತೃತೀಯ ಲಿಂಗ ಅಲ್ಪಸಂಖ್ಯಾತರ ಸಂಘ ಆಗ್ರಹಿಸಿದೆ.

ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ ರೂ.200 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಮೂರು ವರ್ಷದಿಂದ ನಮಗೇನೂ ಸಿಕ್ಕಿಲ್ಲ. ಪ್ರಣಾಳಿಕೆಯ ಪದಗಳು ಬರೀ ಪ್ರಣಾಳಿಕೆಗೆ ಮಾತ್ರ ಸೀಮಿತವಾಗಿದೆ.

ನಾವು ಮಾನವೀಯತೆ ದೃಷ್ಟಿಯಲ್ಲಿ ನೋಡಿ ಎಂದು ಹೇಳುತ್ತಿಲ್ಲ. ನಮ್ಮ ಸಾಂವಿಧಾನಿಕ ಹಕ್ಕು, ಗೌರವಯುತ ಜೀವನ, ಉದ್ಯೋಗ ಹಾಗೂ ಭದ್ರತೆಯನ್ನು ಬಯಸುತ್ತೇವೆ ಎಂದು ಸಂಘದ ಮುಖ್ಯಸ್ಥೆ ಮೇಘಾ ಮಲ್ನಾಡ್ ಹೇಳಿದ್ದಾರೆ.

ನಮಗಾಗಿ ಆಶ್ರಯ ತಾಣಗಳು, ಹಾಸ್ಟೆಲ್‌ಗಳು, ಮನೆಗಳು, ಕೃಷಿ ಭೂಮಿ, ರೂ.2 ಲಕ್ಷ ಸಬ್ಸಿಡಿ, ಬಡ್ಡಿ ರಹಿತ ಸಾಲ, ಪಿಂಚಣಿ ಹಣ ರೂ.2000ಕ್ಕೆ ಏರಿಕೆ ಹಾಗೂ ವೃದ್ಧಾಪ್ಯ ಪಿಂಚಣಿ ರೂ.5,000ಕ್ಕೆ ಹೆಚ್ಚಿಸುವಂತೆ, ಸರ್ಕಾರಿ ಉದ್ಯೋಗಗಳಲ್ಲಿ ಶೇ.1ರಷ್ಟು ಮೀಸಲಾತಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ನೀಡಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಗಳಾಗಿವೆ.

Must Read