February 19, 2026
Thursday, February 19, 2026
spot_img

ನ್ಯಾವಿಟೇರ್ ಸಾಫ್ಟ್‌ವೇರ್ ದೋಷ: ಹಲವು ದೇಶಗಳ ವಿಮಾನ ಸೇವೆಯಲ್ಲಿ ವ್ಯತ್ಯಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾವಿಟೇರ್ ಸಾಫ್ಟ್‌ವೇರ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಗುರುವಾರ ಬೆಳಿಗ್ಗೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ಸೇವೆಗಳು ಅಸ್ತವ್ಯಸ್ತಗೊಂಡವು.

ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಪ್ರಯಾಣಿಕರು ಸುಮಾರು 40 ನಿಮಿಷಗಳ ಕಾಲ ತೊಂದರೆ ಅನುಭವಿಸಿದರು. ಯುರೋಪ್‌ನ ಕೆಲವು ವಿಮಾನ ನಿಲ್ದಾಣಗಳಲ್ಲಿಯೂ ಇದೇ ರೀತಿಯ ವ್ಯತ್ಯಯ ಕಂಡುಬಂದಿದೆ.

ಇದನ್ನೂ ಓದಿ:

ಮೂಲಗಳ ಪ್ರಕಾರ, ಬೆಳಿಗ್ಗೆ 6.45ರಿಂದ 7.28ರವರೆಗೆ ಚೆಕ್-ಇನ್ ವ್ಯವಸ್ಥೆ ಕಾರ್ಯನಿರ್ವಹಿಸಲಿಲ್ಲ. ಬಳಿಕ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಸೇವೆಗಳು ಸಾಮಾನ್ಯ ಸ್ಥಿತಿಗೆ ಮರಳಿದವು ಎನ್ನಲಾಗಿದೆ. ಇಂಡಿಗೋ, ಏರ್ ಇಂಡಿಯಾ ಎಕ್ಸ್ಪ್ರೆಸ್, ಸ್ಪೈಸ್ಜೆಟ್ ಹಾಗೂ ಆಕಾಶ ಏರ್ ವಿಮಾನಗಳ ಹಾರಾಟದ ಮೇಲೆ ಇದರ ಪರಿಣಾಮ ಬೀರಿತು. ಆದರೆ ದೀರ್ಘಕಾಲದ ಅಡಚಣೆ ಉಂಟಾಗಿಲ್ಲವೆಂದು ತಿಳಿಸಲಾಗಿದೆ.

ನ್ಯಾವಿಟೇರ್ ಎಂಬುದು Amadeus IT Groupಗೆ ಸೇರಿದ ಡಿಜಿಟಲ್ ಪ್ರಯಾಣಿಕರ ಸೇವಾ ವೇದಿಕೆಯಾಗಿದೆ. ಕಾಯ್ದಿರಿಸುವಿಕೆ, ಟಿಕೆಟ್ ವ್ಯವಸ್ಥೆ, ಸ್ವಯಂ-ಚೆಕ್-ಇನ್ ಹಾಗೂ ಬ್ಯಾಗೇಜ್ ನಿರ್ವಹಣೆಗೆ ಈ ಕ್ಲೌಡ್ ಆಧಾರಿತ ವ್ಯವಸ್ಥೆಯನ್ನು ಬಳಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !